Athani

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಗ್ಯಾರೇಜ್

Share

ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೈಕ್ ಗ್ಯಾರೇಜ್ ಗೆ ಬೆಂಕಿ ತಗುಲಿ ಗ್ಯಾರೇಜ್ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಅಥಣಿ ತಾಲೂಕಿನ ಜಂಬಗಿ ಗ್ರಾಮದಲ್ಲಿ ನಡೆದಿದೆ.

ಅಥಣಿ ತಾಲೂಕಿನ ಖಿಳೆಗಾಂವ ರಾಜ್ಯ ಹೆದ್ದಾರಿ ಪಕ್ಕ ವ್ಯಾಪಾರ ಮಳಿಗೆಯಲ್ಲಿದ್ದ ಸಚಿನ್ ಕೊಡಗ ಮಾಲೀಕತ್ವದ ಡಿ ಕೆ ಗ್ಯಾರೇಜ್ ಗೆ ಬೆಂಕಿ ತಗುಲಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಗ್ಯಾರೇಜ್ ನಲ್ಲಿದ್ದ ಮೂರು ಬೈಕ್, ಟೈರ್, ಆಯಿಲ್ ಹಾಗೂ ಇನ್ನಿತರ ವಸ್ತುಗಳು ಸಂಪೂರ್ಣ ಭಸ್ಮವಾಗಿದೆ.
ಸ್ಥಳಕ್ಕೆ ಅಥಣಿ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Tags:

error: Content is protected !!