COVID-19

ಕೋವಿಡ್ ಬಗ್ಗೆ ಹೆದರಬೇಡಿ : ಸಿಎಂ ಬೊಮ್ಮಾಯಿ

Share

ಕೊವಿಡ್ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಭೆಯಲ್ಲಿ ಸೂಚಿಸಿದಂತೆ ರಾಜ್ಯದಲ್ಲಿ ಅಗತ್ಯ ಕ್ರಮ. ಬೂಸ್ಟರ್ ಡೋಸ್ ಕೊಡುವುದು, ಶಿಬಿರಗಳನ್ನು ಮಾಡಿ, ಟೆಸ್ಟಿಂಗ್ ಹೆಚ್ಚಿಸಲು ಸೂಚಿಸಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏರ್ಪೋರ್ಟ್ ಗಳಲ್ಲಿ ತಪಾಸಣೆ‌ ನಡೆಸಿ ಕಟ್ಟಚ್ಚರ ವಹಿಸಲಾಗುವದು. ಹೊಸ ವರ್ಷಕ್ಕೆ ಹೊಸ ಗೈಡ್ ಬಗ್ಗೆ ಅಶೋಕ ಸುಧಾಕರ ಚರ್ಚೆ ಮಾಡಿ ತಿಳಿಸ್ತಾರೆ. ಈಗಾಗಲೇ ಆರೋಗ್ಯ ಸಚಿವರಿಗೆ ಸನ್ನದ್ಧರಾಗುವಂತೆ ಮಾಡಿಕೊಳ್ಳುವಂತೆ ಸೂಚಿಸಿದ್ದೇನೆ. ಆಕ್ಸಿಜನ್, ಸೇರಿದಂತೆ ಅಗತ್ಯ ಸಿದ್ದತೆ ಮಾಡಿಕೊಳ್ಳುತ್ತೇವೆ. ಯಾರು ಆತಂಕ ಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕೆ ಇರಲಿ ಎಂದರು.

ಸದನದಲ್ಲಿ ಉತ್ತರ ಕರ್ನಾಟಕದ ವಿಚಾರಗಳ ಚರ್ಚೆ ಆಗದ ವಿಚಾರವಾಗಿ ಪ್ರತಿಕ್ರಿಯಿಸಿ ಕನಿಷ್ಠ ಎರಡು ಮೂರು ದಿನ ಚರ್ಚೆ ಆಗಬೇಕು. ಸಭಾಪತಿಗಳ ಜೊತೆ ಇದೇ ವಿಚಾರ ಮಾತನಾಡಿದ್ದೇನೆ ಎಂದು ಬೊಮ್ಮಾಯಿ ಹೇಳಿದರು.

ಅವಧಿ ಪೂರ್ಣ ಚುನಾವಣೆ ಹೋಗುವ ಮಾತೇ ಇಲ್ಲ. ಕಾಂಗ್ರೆಸ್ ನಾಯಕರಿಗೆ ಅಭದ್ರತೆ ಕಾಡುತ್ತಿದೆ. ಅವರ ಕಾರ್ಯಕರ್ತರನ್ನ ಸನ್ನದ್ಧ ಮಾಡಲು ಈ‌ ರೀತಿಯ ಹೇಳಿಕೆ‌ ನೀಡುತ್ತಿದ್ದಾರೆ ಎಂದು ಸಿಎಂ ತಿಳಿಸಿದರು.

Tags:

covid
error: Content is protected !!