Banglore

ಮಾಲ್ ಶಾಲೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ: ಹೊಸ ಕೊವಿಡ್ ನಿಯಮ ಜಾರಿಮಾಡಿತು ಸರಕಾರ

Share

ರಾಜ್ಯದಕಲ್ಲಿ ಕಳೆದ 10 ದಿನಗಳಿಂದ ಕೋವಿಡ್ 19 ಪ್ರಕರಣಗಳ ಸಂಖ್ಯೆ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದ್ದು, ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಡಿ. ರಂದೀಪ್ ತಿಳಿಸಿದ್ದಾರೆ.

ಕಳೆದ 10 ದಿನಗಳಿಂದ ರಾಜ್ಯದಲ್ಲಿ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೊವಿಡ್ ಪಾಸಿಟಿವಿಟಿ ದರ ಈಗಾಗಲೇ 2.14% ರಷ್ಟಿದೆ. ಹಾಗಾಗಿ ಈ ಕೂಡಲೇ ಕೊವಿಡ್ ಹರಡದಂತೆ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಮಾರ್ಷಲ್ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಶಾಪಿಂಗ್ ಮಾಲ್, ರೆಸ್ಟೋರಂಟ್, ಪಬ್, ಕೆಫೆಟೇರಿಯಾ, ಹೊಟೇಲ್, ಶೈಕ್ಷಣಿಕ ಸಂಸ್ಥೆ, ಹಾಸ್ಟೇಲ್, ಕಚೇರಿ, ಕರ್ಖಾನೆ ಇತ್ಯಾದಿ ಕಡ್ಡಾಯಗೊಳಿಸಲಾಗಿದೆ.ಇನ್ನು ಈ ಜವಾಬ್ದಾರಿಯನ್ನು ಆಯಾ ಸಂಸ್ಥೆಯ ಮಾಲೀಕರಿಗೇ ವಹಿಸಲಾಗಿದೆ. ಸ್ವಂತ ವಾಹನ ಹಾಗೂ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣ ಮಾಡುವವರಿಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆರೋಗ್ಯ ಸಮಸ್ಯೆಗಳಿಂದ ಬಳಲುವವರಿಗೆ ಆದ್ಯತೆಯ ಮೇರೆಗೆ ಪರೀಕ್ಷೇಗೆ ಒಳಪಡಿಸುವುದು, ಫಲಿತಾಂಶ ಲಭ್ಯವಾಗುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅರ್ಹರೆಲ್ಲರಿಗೂ ಕೊವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ತಿಳಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

Tags:

error: Content is protected !!