ಮೂರನೇ ಪೀಠ ಹಾಗೂ ನಾಲ್ಕನೇ ಪೀಠದ ಅವಶ್ಯಕತೆಯೂ ನಮಗೆ ಈಗ ಬೇಕಿಲ್ಲ. ನಮ್ಮ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಈಗ ಬೇಕಿರುವುದು ಕೇವಲ 2ಎ ಮೀಸಲಾತಿ. ನಾವು ಅದರ ಬಗ್ಗೆ ಗಮನಹರಿಸಬೇಕು, ಅದರ ಬಗ್ಗೆ ಹೋರಾಟ ಮಾಡಬೇಕು. ವಿಧಾನಸೌಧದಲ್ಲಿ ಇರುವವರು ರಾಜಕೀಯವಾಗಿ ಹೋರಾಟ ಮಾಡಲಿ, ನಾವು ಹೊರಗೆ ನಿಂತು ಅವರಿಗೆ ಬೆಂಬಲ ಸೂಚಿಸುತ್ತೇವೆ ಎಂದು ಲಿಂಗಾಯತ ಪಂಚಮಸಾಲಿ ಮುಖಂಡೆ ವೀಣಾ ಕಾಶಪ್ಪನವರ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ವೀಣಾ ಕಾಶಪ್ಪನವರ ನಮಗೆ ಪೀಠಗಳಿಗಿಂತ 2ಎ ಮೀಸಲಾತಿ ಸಿಗಬೇಕಿದೆ. ಬಡ ಮಕ್ಕಳಿಗೆ ಶಿಕ್ಷಣ, ಉದ್ಯೋಗಕ್ಕಾಗಿ ನಾವು ಮೀಸಲಾತಿ ಕೇಳುತ್ತಿದೆ. ಈ ನಿಟ್ಟಿನಲ್ಲಿ ಹೋರಾಟ, ಸತ್ಯಾಗ್ರಹ ಮಾಡುವ ಬಗ್ಗೆ ಚಿಂತಿಸಬೇಕಿದೆ. ಸಮಾಜದ ಕಟ್ಟ ಕಡೆಯ ಜನರಿಗೋಸ್ಕರ ಹೋರಾಟ ಮಾಡುತ್ತಿರುವವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. 750 ಕಿ.ಮೀ. ನಡೆದವರು ಯಾರು..? ಬಿಸಿಲಿನಲ್ಲಿ ಕುಳಿತು ಒಂದು ತಿಂಗಳವರೆಗೆ ಸತ್ಯಾಗ್ರಹ ಮಾಡಿದವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ನಮ್ಮ ಮಹಿಳಾ ಘಟಕದಿಂದ ಓನಕೆ, ಖಡ್ಗ ಪ್ರದರ್ಶನ ಮಾಡಿದ್ದೇವು. ಸಿಎಂ ಮನೆಗೆ ಮುತ್ತಿಗೆ ಹಾಕಿ, ಜೈಲಿಗೂ ಹೋಗಿ ಬಂದೇವು. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ. 2ಎ ಮೀಸಲಾತಿಗಾಗಿ ಗ್ರಾಮ ಗ್ರಾಮಗಳಲ್ಲಿ ಉಪವಾಸ ಸತ್ಯಾಗ್ರಹವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.
https://www.facebook.com/watch/live/?ref=watch_permalink&v=646425069927482
ಇನ್ನು ಕಿಶೋರಿ ಅವರು ಕೊಪ್ಪಳದಲ್ಲಿ ಪಂಚಮಸಾಲಿ ಸಮಾಜದ ನಾಲ್ಕನೇ ಪೀಠ ಸ್ಥಾಪನೆ ಬಗ್ಗೆ ಘೋಷಣೆ ಮಾಡಿರುವ ಕುರಿತು ಪ್ರತಿಕ್ರಯಿಸಿದ ವೀಣಾ ಕಾಶಪ್ಪನವರ ನಾವು ಇದನ್ನು ವಿರೋಧಿಸುತ್ತೇವೆ. ನಮ್ಮದು ಒಂದೇ ಒಂದು ಪೀಠ ಅದು ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಅಡಿಯಲ್ಲಿರುವ ಕೂಡಲಸಂಗಮ ಪೀಠ. ನಮಗೆ ಯಾವುದೇ ನಾಲ್ಕನೇ ಪೀಠದ ಅಗತ್ಯವಿಲ್ಲ. ಮೂಲಕ ನನ್ನ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಫೋಟೋವನ್ನು ಬಳಸಿಕೊಂಡು ಪ್ರಚಾರ ಮಾಡಿ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಇದು ಎಲ್ಲವೂ ಸುಳ್ಳು ಸುದ್ದಿ. ಇದಕ್ಕೆ ಯಾರೂ ಕೂಡ ಕಿವಿಗೊಡಬಾರದು ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ನಮ್ಮ ಯಾವುದೇ ಬೆಂಬಲ ಇಲ್ಲ. ಕೂಡಲ ಸಂಗಮದ ಪೀಠದ ಅಡಿಯಲ್ಲಿರುವ ಚನ್ನಮ್ಮನ ಬಳಗ ರಾಜ್ಯ ಘಟಕ. ನಂದು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಭಾವಚಿತ್ರವನ್ನು ಜಾಹೀರಾತಿನಲ್ಲಿ ಬಳಸಿಕೊಂಡಿದ್ದಾರೆ. ಮಹಿಳಾ ಪೀಠಕ್ಕೆ ನಮ್ಮ ವಿರೋಧ ಇಲ್ಲ. ಆದರೆ ನಾವು ಇದರಲ್ಲಿ ಇಲ್ಲ. ಕಿಶೋರಿ ಅವರ ಜೊತೆಗೆ ನಾನು ಮಾತಾಡಿಯೂ ಇಲ್ಲ. ಈ ಬಗ್ಗೆ ಶ್ರೀಗಳ ಜೊತೆಗೆ ಮಾತಾಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇನ್ನು ಮೂರನೇ ಪೀಠದ ಅವಶ್ಯಕತೆಯೂ ನಮಗೆ ಈಗ ಬೇಕಿಲ್ಲ. ನಮ್ಮ ಸಮಾಜಕ್ಕೆ ಈಗ ಬೇಕಿರುವುದು 2ಎ ಮೀಸಲಾತಿ ಅಷ್ಟೇ ಎಂದರು.
ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ನಾನು ಪಾರ್ಟಿಯಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡಿದ್ದೇನೆ. ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆಯಾಗಿ ಪಾರ್ಟಿ ಸಂಘಟನೆಗೆ ಒತ್ತು ಕೊಡುತ್ತಿದ್ದೇನೆ. ಅಭಿಮಾನಿಗಳು ಹಾಗೆ ಅನ್ನುತ್ತಿರುತ್ತಾರೆ, ಒಂದಿಷ್ಟು ಜನ ವಿಧಾನಸಭೆ ಅಂತಾರೆ, ಮತ್ತೊಂದಿಷ್ಟು ಜನ ಲೋಕಸಭೆ ಅಂತಾರೆ. ಹೀಗಾಗಿ ಹೈಕಮಾಂಡ್ ಏನು ಸೂಚಿಸುತ್ತದೆಯೋ ಅದನ್ನು ಮಾಡುತ್ತೇನೆ. ಹೆಚ್ಚೆಚ್ಚು ಮಹಿಳೆಯರನ್ನು ನಮ್ಮ ಪಕ್ಷಕ್ಕೆ ಸೇರ್ಪಡೆ ಮಾಡುವುದಷ್ಟೇ ಈಗಿರುವ ನನ್ನ ಮುಖ್ಯ ಉದ್ದೇಶ ಎಂದರು.
ಒಟ್ಟಿನಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ಮಾಡುವುದಷ್ಟೇ ನಮ್ಮ ಗುರಿ. ನಮಗೆ 3ನೇ ಪೀಠವೂ ಬೇಡ, 4ನೇ ಪೀಠವೂ ಬೇಡ ಎಂದು ವೀಣಾ ಕಾಶಪ್ಪನವರ ಸ್ಪಷ್ಟಪಡಿಸಿದ್ದಾರೆ.