Belagavi

ಶಾಹುನಗರ ಮಧುರಾ ಮಹಿಳಾ ಮಂಡಳದಿಂದ ಬೂಸ್ಟರ್ ಡೋಸ್ ಲಸಿಕೆ ಶಿಬಿರ

Share

ಬೆಳಗಾವಿ ಶಾಹುನಗರ ಮಧುರಾ ಮಹಿಳಾ ಮಂಡಳದ ಆಶ್ರಯದಲ್ಲಿ ಕೋವಿಡ್‌ ಬೂಸ್ಟರ್‌ ಲಸಿಕೆ ನೀಡುವ ಕಾರ್ಯಕ್ರಮವನ್ನು ಗಣೇಶ ಮಂದಿರದ ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.

ಈ ವೇಳೆ ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ ಮಾತನಾಡಿ, ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಬೂಸ್ಟರ್‌ ಡೋಸ್‌ ಲಸಿಕೆ ಪಾತ್ರ ಮಹತ್ವದ್ದಾಗಿದೆ. ಅರ್ಹರು ಬೂಸ್ಟರ್‌ ಡೋಸ್‌ ಲಸಿಕೆ ಪಡೆಯುವ ಮೂಲಕ ಆರೋಗ್ಯದ ಬಗ್ಗೆ ಲಕ್ಷ್ಯ ವಹಿಸಬೇಕು ಎಂದರು.

ಮಧುರಾ ಮಹಿಳಾ ಮಂಡಳದ ಅಧ್ಯಕ್ಷೆ ಶೈಲಾ ಹ.ಮೂರ್ತೆನ್ನವರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ, ಬಾಲಚಂದ್ರ ಸವಣೂರು, ನಗರ ಸೇವಕ ಶ್ರೇಯಸ್‌ ನಾಕಾಡಿ, ನಗರ ಸೇವಕಿ ರೇಷ್ಮಾ ಪಾಟೀಲ ಮುಖ್ಯ ಅತಿಥಿಗಳಾಗಿದ್ದರು.
ಕಣಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಚೇತನ ನೇತೃತ್ವದ ಆರೋಗ್ಯ ಸಿಬ್ಬಂದಿ ಶಾಹುನಗರದ ಮೂರನೇ ಡೋಸ್‌ಗೆ ಅರ್ಹ ನಿವಾಸಿಗಳಿಗೆ ಬೂಸ್ಟರ್‌ ಡೋಸ್‌ ಲಸಿಕೆ ನೀಡಿದರು. ಎರಡನೇ ಲಸಿಕೆ ಪಡೆದು ಹತ್ತು ತಿಂಗಳು ಪೂರೈಸಿದ 24 ಫಲಾನುಭವಿಗಳು ಬೂಸ್ಟರ್‌ ಡೋಸ್‌ ಲಸಿಕೆ ಪಡೆದರು.

ಮಧುರಾ ಮಹಿಳಾ ಮಂಡಳದ ಉಪಾಧ್ಯಕ್ಷೆ ಭಾರತಿ ಸೊಗಲದ, ಕಾರ್ಯದರ್ಶಿ ಸುಷ್ಮಾ ಜಗಜಂಪಿ, ಜಂಟಿ ಕಾರ್ಯದರ್ಶಿ ಮನೀಷಾ ಕಂಕಣಮೇಲಿ, ಸುಷ್ಮಾ ಸೂರ್ಯವಂಶಿ, ಕವಿತಾ ಶಾನಭಾಗ, ನೀತೂ ಹಾಗರಗಿ ಉಪಸ್ಥಿತರಿದ್ದರು.

Tags:

error: Content is protected !!