Vijaypura

ಹಿಜಾಬ್ ಬೆಂಬಲಿಸಿ 33 ವಿದ್ಯಾರ್ಥಿನಿಯರು ಗೈರು: ಡಿಡಿಪಿಯು

Share

ವಿಜಯಪುರ ಜಿಲ್ಲೆಯಲ್ಲಿ ಹಿಜಾಬ್ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪದವಿ ಪೂರ್ವ ಡಿಡಿ ಎಸ್ ಎನ್ ಬಗಲಿ ಮಾಹಿತಿ ನೀಡಿದ್ದು ಎಲ್ಲ ಪಿಯು ಕಾಲೇಜುಗಳಲ್ಲಿ ಕೋರ್ಟ್‌ನ ಮಧ್ಯಂತರ ಆದೇಶ ಪಾಲಿಸುತ್ತಿದ್ದೇವೆ ಎಂದರು.

ಕಾನೂನು ಪಾಲಿಸದೆ ತರಗತಿಯನ್ನು ಒಟ್ಟು 33 ವಿದ್ಯಾರ್ಥಿಗಳು ಬಹಿಷ್ಕರಿಸಿದ್ದಾರೆ‌. ನಿನ್ನೆ ಕಾಲೇಜಿಗೆ 33 ವಿದ್ಯಾರ್ಥಿನಿ ಯರು ಗೈರಾಗಿದ್ದಾರೆ‌. ವಿಜಯಪುರ ನಗರದಲ್ಲಿ 8, ಇಂಡಿಯಲ್ಲಿ 5 ವಿದ್ಯಾರ್ಥಿನಿಯರು ಮುದ್ದೇಬಿಹಾಳ 16, ತಾಳಿಕೋಟಿ – 4 ವಿದ್ಯಾರ್ಥಿನಿ ಯರು ಕ್ಲಾಸ್‌ಗಳಿಗೆ ಗೈರಾಗಿದ್ದಾರೆ‌. ಪಿಯು ಕಾಲೇಜು ಪ್ರಿನ್ಸಿಪಾಲ್‌ಗಳು ನೀಡಿದ ಮಾಹಿತಿ ಎಂದರು. ಎಲ್ಲ ಕಡೆಗಳಲ್ಲಿ ಶಾಂತ ರೀತಿಯಿಂದ ಕ್ಲಾಸ್ ನಡೆಯುತ್ತಿವೆ, ವಿದ್ಯಾರ್ಥಿಗಳ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ, ಉಳಿದೆಡೆ ಶಾಂತಿಯುತವಾಗಿ ವಿದ್ಯಾರ್ಥಿಗಳು ಕ್ಲಾಸ್‌ಗಳಿಗೆ ಹಾಜರಾಗಿದ್ದಾರೆ ಎಂದು ಮಾಹಿತಿ ನೀಡಿದರು.

Tags:

error: Content is protected !!