State

ಹಿಜಾಬ್‍ನಿಂದ ತನ್ನ ವೈಪಲ್ಯ ಮುಚ್ಚಿ ಹಾಕಲು ಯತ್ನ: ರಾಜ್ಯ ಸರ್ಕಾರದ ವಿರುದ್ಧ ಎಂ.ಬಿ.ಪಾಟೀಲ್ ವಾಗ್ದಾಳಿ

Share

ಸರ್ಕಾರ ತನ್ನ ವೈಪಲ್ಯವನ್ನು ಮುಚ್ಚಿ ಹಾಕಲು ಮತ್ತು ಜನರ ದಿಕ್ಕು ತಪ್ಪಿಸಲು ಹಿಜಾಬ್ ಪ್ರಕರಣವನ್ನು ಎತ್ತಿಕೊಂಡಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್ ನಾವು ಶಾಲಾ ಕಾಲೇಜುಗಳಿಗೆ ಹೋಗಿ ರಾಜಕಾರಣ ಮಾಡುತ್ತೇವೆ ಎಂದರೆ ಇದು ಸರಿಯಲ್ಲ. ಹಿಂದೆ ಯಾವಾಗಲೂ ಈ ರೀತಿ ಆಗಿರಲಿಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಮಕ್ಕಳಲ್ಲಿ ವಿಷಬೀಜ ಬಿತ್ತುವ ಕೆಲಸ ಸರಿಯಲ್ಲ. ನಮ್ಮ ವೋಟಿನ ಆಸೆಗಾಗಿ, ರಾಜಕೀಯ ದುರುದ್ದೇಶಕ್ಕಾಗಿ ಈ ರೀತಿ ಮಾಡಬಾರದು. ನಾನು ಕೂಡ ಒಂದು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇನೆ. ಹೀಗಾಗಿ ಶಾಲೆಯಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಮಾಡಬಾರದು. ಇನ್ನು ಮೊದಲು ಏನಿತ್ತು..? ಎಂಬುದನ್ನು ನೋಡಿಕೊಂಡು ಸೌಹಾರ್ದಯುತವಾಗಿ, ಮಾತುಕತೆ ಮೂಲಕ ಈ ವಿವಾದವನ್ನು ಬಗೆಹರಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಸಾಮೂಹಿಕ ನಾಯಕತ್ವದಲ್ಲಿಯೇ ಚುನಾವಣೆ ನಡೆಯುತ್ತದೆ. ಪಂಜಾಬ್‍ನಲ್ಲಿ ಚನ್ನಿ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿರುವುದನ್ನು ಬಿಟ್ಟರೆ ಹಿಂದೆ ಎಲ್ಲಾ ಸಂದರ್ಭಗಳಲ್ಲಿ ಸಾಮೂಹಿಕ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸಿದ್ದೇವೆ. ಮುಂದಿನ ಚುನಾವಣೆಯಲ್ಲಿ 125 ಸೀಟ್‍ಗಳಿಗಿಂತೂ ಹೆಚ್ಚು ಸ್ಥಾನ ಗೆಲ್ಲುವುದು ನಮ್ಮ ಗುರಿ. ಹೀಗಾಗಿ 125 ಸೀಟ್ ಪಡೆದ ನಂತರ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಶಾಸಕರ ಅಭಿಪ್ರಾಯ ಪಡೆದುಕೊಂಡು ನಮ್ಮ ವರಿಷ್ಠರು ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಹೀಗಾಗಿ ಈಗ ಇದರ ಬಗ್ಗೆ ಮಾತನಾಡಿದ್ರೆ ಉಪಯೋಗ ಇಲ್ಲ ಎಂದರು.

 

Tags:

error: Content is protected !!