State

ಸಿದ್ಧರಾಮಯ್ಯ ಕಾಂಗ್ರೆಸ್‍ನಲ್ಲಿ ಯಾವಾಗಲೂ ಮಾಸ್ ಲೀಡರ್-ಸತೀಶ್ ಜಾರಕಿಹೊಳಿ

Share

ಮಾಜಿ ಸಿಎಂ ಸಿದ್ಧರಾಮಯ್ಯ ಕಾಂಗ್ರೆಸ್‍ನಲ್ಲಿ ಯಾವಾಗಲೂ ಮಾಸ್ ಲೀಡರ್. ಅವರು ಯಾವಾಗಲೂ ಹೀರೋ ಆಗಿ ಮುಂಚೂಣಿಯಲ್ಲಿರುತ್ತಾರೆ ಎಂದು ಹೇಳುವ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಸತಿಶ್ ಜಾರಕಿಹೊಳಿ ಡಿಕೆಶಿಗೆ ಟಾಂಗ್ ನೀಡಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿ, ಸಿದ್ಧರಾಮಯ್ಯ ಕಾಂಗ್ರೆಸ್‍ನಲ್ಲಿ ವೀಕ್ ಆಗಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು, ಕಾಂಗ್ರೆಸ್‍ನಲ್ಲಿಸಿದ್ಧರಾಮಯ್ಯ ಪಕ್ಕಾ ಫಾರ್ಮನಲ್ಲಿದ್ದಾರೆ. ನಿಶ್ಯಕ್ತರಾಗಿಲ್ಲ. ಟಾಪಲ್ಲಿದ್ದಾರೆ, ಇದ್ದೇ ಇರ್ತಾರೆ. ಇಡೀ ರಾಜ್ಯದಲ್ಲಿ ಅವರದ್ದೇ ಆದ ಬೆಂಬಲಿಗರ ಪಡೆ ಇದೆ. ಅವರದ್ದೇ ಆದ ಮಾಸ್ ಆಕರ್ಷಣೆ ಇದೆ. ಅವರು ರಾವಾಗಲೂ ನಮಬರ್ ಒನ್, ನಂಬರ್ ಒನ್ನೇ ಇರ್ತಾರೆ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ಗೆ ಟಾಂಗ್ ನೀಡಿದರು.

Tags:

error: Content is protected !!