ನಮ್ಮ ಪಕ್ಷದ ಅಲ್ಪಸಂಖ್ಯಾತ ಹಿರಿಯ ನಾಯಕರಾದ ಸಿಎಂ ಇಬ್ರಾಹಿಂ ಅವರು, ಕೆಲವು ದಿನಗಳ ಹಿಂದ ಬೇಜಾರನಲ್ಲಿ ಇದ್ದರು. ಅದೇ ಬೇಜಾರದಿಂದ ಪಕ್ಷ ಬೀಡುವುದಾಗಿ ಹೇಳಿದರು. ಆದರೆ ಈಗ ಎಲ್ಲವು ಸರಿ ಹೋಗಿದೆ. ನಮ್ಮ ಪಕ್ಷದ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಬಿಟ್ಟು ಇಬ್ರಾಹಿಂ ಅವರು ಎಲ್ಲೂ ಹೋಗಿವುದಿಲ್ಲ. ಅವರು ಕಾಂಗ್ರೆಸ್ ಪಕ್ಷವನ್ನು ಬೀಡುವುದಿಲ್ಲ, ನಮ್ಮ ಪಕ್ಷದಲ್ಲಿಯೇ ಮುಂದುವರೆಯುತ್ತಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್‌ರವರು ಸ್ಪಷ್ಟಪಡಿಸಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಇಬ್ರಾಹಿಂ ಅವರು ನಮ್ಮ ನಾಯಕರು. ಅಲ್ಪಸಂಖ್ಯಾತರಲ್ಲಿ ಅವರೇ ನಮ್ಮಗೆ ಹಿರಿಯರು. ಅವರೇ ನಮ್ಮ ನಾಯಲರು ಅಂತಾ ನಾನೇ ಒಪ್ಪಿಕೊಂಡಿದ್ದೇನೆ. ಅವರ ರಾಜಕೀಯ ಅನುಭವದ ಮುಂದೆ ನಾನೇನೂ ಅಲ್ಲಾ. ಈಗ ಸಿದ್ದರಾಮಯ್ಯ ಅವರು ಇಬ್ರಾಹಿಂ ಅವರೊಂದಿಗೆ ಮಾತನಾಡಿ ಸಮಸ್ಯೆ ಪರಿಹಾರ ಮಾಡಿದ್ದಾರೆ, ಇಬ್ರಾಹಿಂ ಅವರು ಪಕ್ಷ ಬೀಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಪಕ್ಷದ ಹೈ ಕಮಾಂಡ್ ತೀರ್ಮಾನವೇ ಅಂತಿಮ.
ವಿರೋಧ ಪಕ್ಷದ ನಾಯಕರ ಆಯ್ಕೆ ವಿಚಾರವಾಗಿ ಎರಡ್ಮೂರು ಹೆಸರುಗಳನ್ನು ಕಳುಹಿಸಿಕೊಡಲಾಗಿತ್ತು. ಅದರಲ್ಲಿ ಸಿಎಂ ಇಬ್ರಾಹಿಂ ಹೆಸರು ಕೂಡಾ ಹಾಕಲಾಗಿತ್ತು. ಆದರೆ ನಮ್ಮ ಪಕ್ಷದ ಹೈ ಕಮಾಂಡ್ ತೀರ್ಮಾನದಂತೆ ಎಲ್ಲರೂ ಒಪ್ಪಿಕೊಂಡು ನಮ್ಮ ನಾಯಕರಾದ ಸಿದ್ದರಾಮಯ್ಯನವರನ್ನು ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲಾಗಿದೆ. ಇನ್ನೂ ಸಿಎಂ ಇಬ್ರಾಹಿಂ ಆಯ್ಕೆಯಾಗದಿರುವುದಕ್ಕೆ ನಮ್ಮಗೂ ಬೇಜಾರ ಇದೆ. ಸದ್ಯ ನಮ್ಮ ಪಕ್ಷದಲ್ಲಿ ಯಾವುದೇ ಕಿತ್ತಾಟ, ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲರೂ ಈಗ ಒಗ್ಗಟ್ಟಾಗಿದ್ದೇವೆ. ಜನರು ಕೂಡಾ ಬಿಜೆಪಿಗೆ ದುರಾಡಳಿತದಿಂದ ಬೇಸತು ಹೋಗಿದ್ದಾರೆ. ನಮ್ಮ ಪಕ್ಷದ ಕಾರ್ಯಕ್ರಮಗಳ ಕುರಿತು ಜನರೇ ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಕುಡಿಕೊಂಡು ಪಕ್ಷವನ್ಮು ಅಧಿಕಾರಕ್ಕೆ ತರುತ್ತೇವೆ. ಮುಂದಿನ ಸಿಎಂ ಯಾರಾಗಬೇಕು ಅನ್ನುವುದು ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾಣ ಮಾಡುತ್ತಾರೆ ಎಂದು ಹೇಳಿದರು.
ಇಬ್ರಾಹಿಂ ಅವರು 40 ಕೋಟಿ ಸಾಲದ ಕುರಿತು ನಮ್ಮ ಮುಂದೆ ಬೇಡಿಕೆ ಇಟ್ಟಿಲ್ಲ.
ಇಬ್ರಾಹಿಂ ಅವರು 40 ಕೋಟಿ ಸಾಲದ ಕುರಿತು ್ಮ ಮುಂದೆ ಎಂದಿಗೂ ಬೇಡಿಕೆ ಇಟ್ಟಿಲ್ಲ. ಮಾಧ್ಯಮದ ಮುಂದೆ ಅವರು ತಮ್ಮ ಸಾಲದ ಬಗ್ಗೆ ಹೇಳಿಕೊಂಡಿರಬಹುದು. ಆದರೆ ಇದುವರೆಗೂ ಅದರ ಬಗ್ಗೆ ನಮ್ಮ ಮುಂದೆ ಯಾವತ್ತೂ ಮಾತಾಡಿಲ್ಲ. ಮಾಧ್ಯಮವರು ಹೊಂದಿಸಿ ಕೊಡಬಹುದು ಎಂಬ ಭರವಸೆಯಿಂದ ನಿಮ್ಮ ಮುಂದೆ ಹೇಳಿರಬಹುದು, ನಮ್ಮ ಜೊತೆಗೆ ಅದರ ಬಗ್ಗೆ ಮಾತಾಡಿಲ್ಲ. ಜೊತೆಗೆ ಪಕ್ಷವಮ್ನು ಬಿಟ್ಟು ಹೋಗುವುದಿಲ್ಲ ಎಂದು ಅವರೇ ಹೇಳಿದ್ದಾರೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಬರುವ ಮುಂಚೆಯಿಂದಲ್ಲೂ ಹಿಜಾಬ್ ಇತ್ತು.
ಹಿಜಾಬ್‌ನ್ನು ನಮ್ಮ ಹೆಣ್ಣುಮಕ್ಕಳು ಇಂದು ನಿನ್ನೆಯಿಂದ ಹಾಕಿಕೊಳ್ಳುತ್ತಿಲ್ಲ. ಸ್ವಾತಂತ್ರ್ಯ ಬರುವ ಮುಂಚೆಯಿಂದಲ್ಲೂ ಹೆಣ್ಣು ಮಕ್ಕಳು ಹಿಜಾಬ್ ಹಾಕುತ್ತಿದ್ದಾರೆ. ಹಿಜಾಬ್‌ದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಹಿಜಾಬ್ ಹಾಕುತ್ತಾರೆ ಅಂತಾ ಮಕ್ಕಳಿಗೆ ಕೇಸರಿ ಶಾಲು ಹಾಕಿಸುತ್ತಿದ್ದಾರೆ, ಅದೂ ಎಷ್ಟರಮಟ್ಟಿಗೆ ಸರಿ..?. ಇದೂ ರಾಜಕೀಯ ಕಾಣುತ್ತಿದೆ, ಹೀಗೆ ಮಾಡುವುದು ತಪ್ಪು. ಸದ್ಯ ಹಿಜಾಬ್ ವಿವಾದ ನ್ಯಾಯಾಲಯದಲ್ಲಿದೆ. ನಮ್ಮ ಅಭಿಪ್ರಾಯ ಇಲ್ಲಿ ಹೇಳುವುದಕ್ಕೆ ಬರುವುದಿಲ್ಲ. ನ್ಯಾಯಾಲಯದ ಮೇಲೆ ವಿಶ್ವಾಸ ಹೊಂದಿದ್ದೇವೆ, ನೂರಕ್ಕೆ ನೂರು ನಮ್ಮ ಪರ ತೀರ್ಪು ಬರುವ ನಿರೀಕ್ಷೆ ಹೊಂದಿದ್ದೇವೆ. ಬಿಜೆಪಿಯವರು ರಾಜಕೀಯ ಲಾಭ ಪಡೆಯಲು ಹಿಜಾಬ್ ಎಳೆದು ತಂದಿದ್ದಾರೆ. ಹಿಂದು ಮುಸ್ಲಿಂ ಗಲಾಟೆಯಿಂದಲೇ ಅವರು ಅಧಿಕಾರಕ್ಕೆ ಬರುತ್ತಿದ್ದಾರೆ ಹೊರತು, ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳಿಂದ ಅಲ್ಲ. ನ್ಯಾಯಾಲಯದ ತೀರ್ಪನ್ನು ಎಲ್ಲರು ಸ್ವಾಗತಿಸಬೇಕಾಗುತ್ತದೆ, ನ್ಯಾಯಾಲಯಕ್ಕಿಂತ ಇಲ್ಲಿ ಯಾರು ಕೂಡಾ ದೊಡ್ಡವರಲ್ಲ. ಶ್ರೀ ರಾಮ ಮಂದಿರ ಜನ್ಮ ಭೂಮಿ ತೀರ್ಪನ್ನು ನಮ್ಮ ಸಮಾಜದವರೆಲ್ಲರೂ ಸ್ವಾಗತಿಸಿದ್ದೇವೆ. ಹಿಜಾಬ್ ರಾಮ ಮಂದಿರ ತೀರ್ಪನ್ನು ಮಿಕ್ಸ್ ಮಾಡಬೇಡಿ ಎಂದು ಹೇಳಿದರು.