Belagavi

ಶಹಾಪುರ ದಾನಮ್ಮದೇವಿಯ 37ನೇ ವಾರ್ಷಿಕೋತ್ಸವ ನಿಮಿತ್ಯ ಅದ್ಧೂರಿ ಪಲ್ಲಕ್ಕಿ ಉತ್ಸವ

Share

ಬೆಳಗಾವಿಯ ಶಹಾಪೂರದ ಮಹಾತ್ಮ ಫುಲೆ ರಸ್ತೆಯಲ್ಲಿರುವ ದಾನಮ್ಮ ದೇವಿ ಮಂದಿರದ ದಾನಮ್ಮ ದೇವಿಯ 37ನೇ ವಾರ್ಷಿಕೋತ್ಸವದ ಸಮಾರಂಭ ನಿಮಿತ್ಯ ಪಲಕ್ಕಿ ಉತ್ಸವ ಜರುಗಿತು.

ಜಗಜ್ಯೋತಿ ಬಸವೇಶ್ವರ ಕಲ್ಯಾಣ ಮಂಟಪ ಟ್ರಸ್ಟ್. ಶ್ರೀ ದಾನಮ್ಮ ದೇವಿಯ 37ನೇ ವಾರ್ಷಿಕೋತ್ಸವದ ಸಮಾರಂಭ ನಿಮಿತ್ಯ ಚಂದ್ರಶೇಖರ ಎಸ್. ಬೆಂಬಳಗಿ-ಅಧ್ಯಕ್ಷರು ಹಾಗೂ ಗುರುಬಸಪ್ಪಣ್ಣ ಚೊಣ್ಣದ-ಉಪಾಧ್ಯಕ್ಷರು ಮತ್ತು ಸಿ. ಎಂ. ಕಿತ್ತೂರ- ಕಾರ್ಯದರ್ಶಿ ಇವರ ಉಪಸ್ಥಿತಿಯಲ್ಲಿ ಡಾ|| ವಿ. ವಿ. ಎಣ್ಣಿ ಇವರ ಹಸ್ತದಿಂದ ಉದ್ಘಾಟನೆ ಯೊಂದಿಗೆ ಪಲಕ್ಕಿ ಉತ್ಸವ ಜರುಗಿತು. ಸದರಿ ಕಾರ್ಯಕ್ರಮಕ್ಕೆ ಡಾ|| ಸುರೇಶ ಹಾಗೂ ಉದ್ದಿಮೆದಾರರಾದ ಶ್ರೀ ಅಮರ ಹತ್ತರಕಿ ಹಾಗೂ ಸಂಸ್ಥೆಯ ಕಾರ್ಯಕಾರಿ ಮಂಡಳಿ ಸದಸ್ಯರು ಮತ್ತು ಗಣ್ಯರು ಹಾಗೂ ದಾನಮ್ಮ ದೇವಿಯ ಭಕ್ತಾದಿಗಳ ಉಪಸ್ಥಿತಿಯಲ್ಲಿ ವಿಜೃಂಭಣೆ ಯಿಂದ ಜರುಗಿತು.

ಈ ವೇಳೆ ಭಕ್ತರು ದೇವಿಯ ದೇವಿಗೆ ಜೈಕಾರ ಹಾಕುತ್ತ ಪಲ್ಲಕ್ಕಿಯನ್ನು ಹೊತ್ತು ಸಾಗಿದರು. ಈ ವೇಳೆ ದೇವಿಗೆ ವಿಶೇಷ ಪೂಜೆ ಆರತಿ ಮೊದಲಾದ ಕಾರ್ಯಕ್ರಮಮಗಳು ಜರುಗಿದವು.

Tags:

error: Content is protected !!