ಕಾಂಗ್ರೆಸ್‍ನವರು ತಮ್ಮವರಿಗೆ ಮಾತ್ರ ಭಾರತ ರತ್ನ ಕೊಟ್ಟರು. ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡುವಂತೆ ವಾಜಪೇಯಿ ಪ್ರಸ್ತಾಪ ಮಾಡಿದಾಗ ಭಾರತ ರತ್ನ ಕೊಟ್ಟರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿ.ಟಿ.ರವಿ ಅಂಬೇಡ್ಕರ್ ದೇಶ ವಿಭಜನೆ ಬೇಡ ಅಂತ ಹೇಳಿದ್ದರು. ಹಾಗೇನಾದರೂ ಮಾಡಿದರೂ ಹಿಂದೂ ಮುಸ್ಲಿಮರನ್ನು ಗೌರವಯುತವಾಗಿ ವಿನಿಮಯ ಮಾಡಿಕೊಳ್ಳಬೇಕು ಎಂದು ತಮ್ಮ ಥಾಟ್ಸ್ ಆಫ್ ಪಾಕಿಸ್ತಾನ ಪುಸ್ತಕದಲ್ಲಿ ಹೇಳಿದ್ದಾರೆ. ಆಗ ಆ ರೀತಿ ಹೇಳಿದ್ದಕ್ಕೆ ಅಂಬೇಡ್ಕರ್ ಕೆಲವರ ವಿಚಾರದಲ್ಲಿ ಕೋಮುವಾದಿಯಾದರು. ಅಂಬೇಡ್ಕರ್ ಸಾವರ್ಕರ್ ಏಜೆಂಟ್ ಅನ್ನಿಸಿಕೊಂಡರು.

ಅಂಬೇಡ್ಕರ್ ಶಿಕ್ಷಣ, ಸಂಘಟನೆ ಮಾರ್ಗ ತೋರಿಸಿದರು. ಸಮಾಜ ಸಶಕ್ತವಾಗಬೇಕೆಂದರೆ ಎಲ್ಲರೂ ಸಬಲರಾಗಬೇಕು. ಬಿಜೆಪಿಯಿಂದ ಅಂಬೇಡ್ಕರ್ ಪಂಚಧಾಮಗಳ ಅಭಿವೃದ್ಧಿ ಮಾಡಲಾಗಿದೆ. ಬಿಜೆಪಿ ಅಂಬೇಡ್ಕರ್ ವಿರೋಧಿ ಅಂತ ಬಿಂಬಿಸುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್‍ನ್ನು ಸೋಲಿಸಿದವರು, ಇಂದು ಅಂಬೇಡ್ಕರ್ ಪರ ಎಂದು ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದರು.