State

ರಾಷ್ಟ್ರಧ್ವಜಕ್ಕೆ ಅಪಮಾನ: ಈಶ್ವರಪ್ಪ ನಾಲಾಯಕ್ ಎಂದ ಸಿದ್ದರಾಮಯ್ಯ..!

Share

ಮುಂದಿನ ದಿನಗಳಲ್ಲಿ ಕೆಂಪು ಕೋಟೆ ಮೇಲೆಯೂ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ನೀಡಿರುವ ವಿವಾದಾತ್ಮಕ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. ರಾಷ್ಟ್ರಧ್ವಜ ನಮ್ಮ ರಾಷ್ಟ್ರದ ಗೌರವದ ಸಂಕೇತ. ಅದಕ್ಕೆ ಅಪಮಾನ ಮಾಡೋದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಸಚಿವ ಕೆ.ಎಸ್.ಈಶ್ವರಪ್ಪ ಈ ದೇಶದಲ್ಲಿ ಇರೋದಿಕ್ಕೆ ನಾಲಾಯಕ್ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಸಚಿವ ಈಶ್ವರಪ್ಪಗೆ ರಾಷ್ಟ್ರಧ್ವಜದ ಬಗ್ಗೆ ಗೌರವ ಇಲ್ಲ ಅನ್ನೋದು ಇದರಿಂದ ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ. ರಾಷ್ಟ್ರಧ್ವಜದ ಬಗ್ಗೆ ಗೌರವ ಇಲ್ಲದೇ ಇರುವವರು ಸಾರ್ವಜನಿಕ ಜೀವನದಲ್ಲಿ, ರಾಜಕೀಯದಲ್ಲಿ ಇರಬಾರದು. ಈ ದೇಶದಲ್ಲಿ ಇರುವ ಪ್ರತಿಯೊಬ್ಬ ಪ್ರಜೆ ಕೂಡ ರಾಷ್ಟ್ರ ಧ್ವಜಕ್ಕೆ ಗೌರವ ಕೊಡಬೇಕು ಎಂದರು.

 

 

Tags:

error: Content is protected !!