hubbali

ರಾಜ್ಯದಲ್ಲಿ ಪಕ್ಷಾಂತರ ಪರ್ವ ಇನ್ನೂ ಪ್ರಾರಂಭವಾಗಿಲ್ಲ: ಅದಕ್ಕೆ ಇನ್ನೂ ಒಂದು ವರ್ಷ ಬೇಕಾಗುತ್ತೆ: ಸತೀಶ ಜಾರಕಿಹೊಳಿ

Share

ನಮ್ಮ ಪಕ್ಷಕ್ಕೆ ಬರುವವರು ಬರುವಾಗ ಬುರುತ್ತಾರೆ. ಇನ್ನೂ ರಾಜ್ಯದಲ್ಲಿ ಪಕ್ಷಾಂತರ ಪರ್ವ ಪ್ರಾರಂಭವಾಗಿಲ್ಲ, ಅದಕ್ಕೆ ಕಡಿಮೆ‌ ಅಂದರು ಒಂದು ವರ್ಷ ಬೇಕಾಗುತ್ತದೆ. ಈಗಲೇ ಯಾರು ಬರುತ್ತಾರೆ ಎಂಬುವುದನ್ನು ಹೇಳುವುದಕ್ಕೆ ಕಷ್ಟವಾಗುತ್ತದೆ ಎಂದು ಕೆಪಿಸಿಸಿ‌ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಹುಬ್ಬಳ್ಳಿ ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಇದರ ಬಗ್ಗೆ ನಮ್ಮ ಹಲವು‌ ನಾಯಕರು ಹೇಳಿಕೆಗಳನ್ನು ನೀಡಿದ್ದಾರೆ. ಪಕ್ಷಾಂತರ ಪರ್ವ ಕಾಣಿಸಿಕೊಳ್ಳಬೇಕಾದರೆ, ಅದಕ್ಕೆ ಅದರದೆಯಾದ ಸಮಯ ತೆಗೆದುಕೊಳ್ಳುತ್ತದೆ. ಬೇರೆ ಪಕ್ಷದಿಂದ ನಮ್ಮ ಪಕ್ಷಕ್ಕೆ ಯಾರು ಬರುತ್ತಾರೆ ಎನ್ನುವುದನ್ನು ಖಚಿತವಾಗಿ ಈಗಲೇ ಹೇಳುವುದಕ್ಕೆ ಬರುವುದಿಲ್ಲ ಎಂದರು.

ಹಿಜಾಬ್ ಗಲಾಟೆಯನ್ನು ಸರ್ಕಾರ, ಆಡಳಿತ ಮಂಡಳಿಗಳು ನಿಯಂತ್ರಿಸಬೇಕು.

ಹುಜಾಬ್ ಗಲಾಟೆ ಎರಡ್ಮೂರು ದಿನ ಮಾತ್ರ ಇರುತ್ತದೆ. ಆಮೇಲೆ ಅದೂ ತನ್ನಗಾಗುವ ವಿಶ್ವಾಸವಿದೆ. ಮಕ್ಕಳ ಶಿಕ್ಷಣದ ಮೇಲೆ ಹಿಜಾಬ್‌ ಪರಿಣಾಮ ಬೀರಬಾರದು.‌ ಮಕ್ಕಳು ಇದರ ಬಗ್ಗೆ ಹೆಚ್ಚು ಗಮನ ಹರಿಸಬಾರದು, ಅವರು ಕಲಿಯುವ ವಯಸ್ಸಾಗಿದೆ. ಹಾಗಾಗಿ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳುವ ಕಡೆ ಗಮನ ಹರಿಸಬೇಕು.‌ ಇಂತಹ ವಿವಾದಗಳನ್ನು ನೋಡಿಕೊಳ್ಳಲು ಕಾನೂನು, ಸರ್ಕಾರ ಹಾಗೂ ಆಡಳಿತ ಮಂಡಳಿಗಳು ಇರುತ್ತವೆ.‌ಅವರು ಅದನ್ನು ನೋಡಿಕೊಳ್ಳುತ್ತಾರೆ. ರಾಜ್ಯ ಸರ್ಕಾರ‌ ಜೊತೆಗೆ ಆಡಳಿತ ಮಂಡಳಿಗಳು ಹೆಚ್ಚು ಇದರ ಬಗ್ಗೆ ನಿಗಾವಹಿಸಿ, ಹಿಜಾಬ್ ವಿವಾದವನ್ನು ನಿಯಂತ್ರಿಸಬೇಕು ಎಂದು ಒತ್ತಾಯ ಮಾಡಿದರು. ‌

ಸಿಎಂ ಇಬ್ರಾಹಿಂ ನಮ್ಮ ಪಕ್ಷ ಬಿಟ್ಟು ಹೋಗುವುದಿಲ್ಲ ಎಂಬ ನಂಬಿಕೆ ಇದೆ.

ಪ್ರಸ್ತುತ ಸಿಎಂ ಇಬ್ರಾಹಿಂ ಅವರು ನಮ್ಮ ಪಕ್ಷವನ್ನು ಅಧಿಕೃತವಾಗಿ ಬಿಟ್ಟು ಹೋಗಿಲ್ಲ, ಸದ್ಯ ಅವರು ನಮ್ಮ ಪಕ್ಷದಲ್ಲಿಯೇ ಇದ್ದಾರೆ. ಮುಂದೆಯೂ ಅವರು ನಮ್ಮ ಪಕ್ಷದಲ್ಲಿ ಇರುತ್ತಾರೆ ಎಂಬ ನಂಬಿಕೆ ಇದೆ. ನಮ್ಮ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು, ಇಬ್ರಾಹಿಂ ಅವರ ಜೊತೆ ಮಾತನಾಡುತ್ತೇನೆ ಅಂದಿದ್ದಾರೆ. ಅವರ ಹಂತದಲ್ಲಿ ಮಾತಾಡಿ ಸಮಸ್ಯೆ ಪರಿಹಾರ ಮಾಡುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‌

ಇನ್ನೂ ಸಿಎಂ ಇಬ್ರಾಹಿಂ ಅವರ ಬೀಗತನ ಮುರಿದು ಬಿದಿದ್ದೆ ಎಂಬ ಹೇಳಿಕೆ ಪ್ರತಿಕ್ರಿಯೆ ನೀಡಿ, ಬೀಗತನ ಮುರಿಯುವ ಹಂತದಲ್ಲಿದ್ದಾಗ, ಹೊಸ ಹಿರಿಯರು ಬಂದು ಕೂಡಿಸಿದ್ದರೆ, ಮತ್ತೆ ಬೀಗತನ ಕೂಡುವ ಸಾಧ್ಯತೆ ಇದೆ. ಒನ್ ಟು ಒನ್ ಮಾತುಕತೆ ಆದಗಲ್ಲೇ ಅದಕ್ಕೆ ಪರಿಹಾರ ಸಿಗುತ್ತದೆ. ಸಿಎಂ ಇಬ್ರಾಹಿಂ ಹಾಗೂ ಸಿದ್ದರಾಮಯ್ಯವರ ನಡುವೆ ಏನಾಗಿದೆ ಎಂಬುವುದು ನಮ್ಮಗೆ ಗೊತ್ತಿಲ್ಲ. ಒನ್ ಟು ಒನ್‌ ಮಾತುಕತೆ ಆದ್ಮೇಲೆ ಉತ್ತರ ಸಿಗುತ್ತದೆ. ಅವರು ನಮ್ಮ‌ಪಕ್ಷದಲ್ಲಿಯೇ ಇರಬೇಕು ಅನ್ನುವುದು ನಮ್ಮ‌ ಆಶಯವಾಗಿದೆ ಎಂದು ತಿಳಿಸಿದರು.

Tags:

error: Content is protected !!