ಬೆಳಗಾವಿಯ ರೈಲು ನಿಲ್ದಾಣದ ನವೀಕರಣ ಕಾರ್ಯ ಭರದಿಂದ ಸಾಗಿದ್ದು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಸಂಸದೆ ಮಂಗಳಾ ಅಂಗಡಿ ಭೇಟಿ ನೀಡಿ ಕಾಮಗಾರಿ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ಉತ್ತರ ಕರ್ನಾಟಕದಲ್ಲಿ ರೈಲ್ವೇ ಅಭಿವೃದ್ಧಿ ಮಾಡಬೇಕೆಂಬುದು ಕೇಂದ್ರ ರೈಲ್ವೆಯ ರಾಜ್ಯ ಖಾತೆಯ ಸಚಿವರಾಗಿದ್ದ ದಿ.ಸುರೇಶ್ ಅಂಗಡಿ ರವರ ಕನಸಿನ ಕೂಸಾಗಿತ್ತು. ಹಾಗಾಗಿ ಸುರೇಶ್ ಅಂಗಡಿರವರು ಈ ಭಾಗದಲ್ಲಿ ಅನೇಕ ರೈಲ್ವೇ ಯೋಜನೆಗಳಿಗೆ ಚಾಲನೆ ನೀಡಿದ್ದರು. ಅದರಂತೆ 190ಕ್ಕಿಂತ ಹೆಚ್ಚು ಕೋಟಿ ಅನುದಾನ ನೀಡಿ ಬೆಳಗಾವಿ ನಗರದಲ್ಲಿರುವ ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಬೃಹತ್ ಕಾಮಗಾರಿಗೆ ಯೋಜನೆ ರೂಪಿಸಿದ್ದರು. ಹಾಗಾಗಿ ಸುಮಾರು 190ಕೋಟಿ ರೂಪಾಯಿ ವೆಚ್ಚದಲ್ಲಿ ಬೆಳಗಾವಿ ರೈಲ್ವೆ ನಿಲ್ದಾಣ ನವೀಕರಣ ಕಾಮಗಾರಿ ವೇಗವಾಗಿ ಚಾಲ್ತಿಯಲ್ಲಿದೆ.

ಈಗಾಗಲೇ ಕಾಮಗಾರಿಯ ಸುಮಾರು 60ರಷ್ಟು ಕೆಲಸ ಮುಕ್ತಾಯಗೊಂಡಿದ್ದು ರೈಲು ನಿಲ್ದಾಣ ಮುಂಭಾಗ ಆಕರ್ಷಿತವಾಗ ಕಾಣುತ್ತಿದೆ. ನಾಲ್ಕು ಮಹಡಿಯಲ್ಲಿ ನಿರ್ಮಾಣವಾಗುತ್ತಿರುವ ಬೆಳಗಾವಿ ನಗರದ ಈ ರೈಲ್ವೆ ಸ್ಟೇಶನ್‍ನಲ್ಲಿ ಎಲ್ಲಾ ಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಹಾಗಾಗಿ ಇಂದು ಸ್ಥಳಕ್ಕೆ ಸಂಸದೆ ಮಂಗಳಾ ಅಂಗಡಿ ಭೇಟಿ ನೀಡಿ ಕಾಮಗಾರಿಯ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕಾಮಗಾಯ ವೀಕ್ಷಣೆ ಮಾಡಿ ಗುಣಮಟ್ಟ ಕುರಿತಂತೆ ಪರಿಶೀಲಿಸಿದರು.
ಈ ವೇಳೆ ನಮ್ಮ ಇನ್ ನ್ಯೂಸ್‍ನೊಂದಿಗೆ ಮಾತನಾಡಿದ ಸಂಸದೆ ಮಂಗಳಾ ಅಂಗಡಿ, ಬೆಳಗಾವಿ ನಗರದ ಈ ರೈಲು ನಿಲ್ದಾಣ ಕಮಗಾರಿ ವೆಗವಾಗಿ ನಡೆಯುತ್ತದೆ. ಸುಮಾರು 190ಕೋಟ ರೂಪಾಯಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ಮಾಡಲಾಗುತ್ತಿದ್ದು ಎಪ್ರೀಲ್ ವೇಳೆಗೆ ಮುಕ್ತಾಯಗೊಳ್ಳಲಿದೆ. ಇನ್ನು ಕಾಮಗಾರಿಯನ್ನು ಬೇಗನೇ ಮುಕ್ತಾಯಮಾಡುವಂತೆ ಹಾಗೂ ಗುನಮಟ್ಟದ ಕಾಮಗಾರಿಯನ್ನು ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಮೂಲಕ ಸಾರ್ವಜನಿಕರ ಬಳಕೆಗೆ ಎಪ್ರೀಲ್ ವೇಳೆಗೆ ಲಭ್ಯವಾಗಲಿದೆ ಎಂದರು.
ಇನ್ನು ಇದೇ ವೇಳೆ ಮಾತನಾಡಿದ ರೈಲ್ವೆ ವಿಕಾಸ ನಿಗಮದ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಅರುಣಕುಮಾರ್ ಪಾಟೀಲ್ ಮಾತನಾಡಿ, ಈ ಕಾರ್ಯ ರೈಲು ವಿಕಾಸ ನಿಗಮದ ವತಿಯಿಂದ ಪ್ರಾರಂಭಿಸಲಾಗಿದೆ. ಹಾಗಾಗಿ ಇಲ್ಲಿನ ಎಲ್ಲಾ ಕೆಲಸಗಳನ್ನು ಸಂಸದರು, ಹಾಗೂ ಮೇಲಾಧಿಕಾರಿಗಳ ಅಧೀನದಲ್ಲಿ ಕೆಲಸ ಮಾಡುತ್ತಿದ್ದೇವೆ. ಆದಷ್ಟು ಬಗನೇ ಕೆಲ ಮುಗಿಸಬೇಕೆಂಬ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಬೆಳಗಾವಿ ನಗರದಲ್ಲಿ ಈ ರೈಲು ನಿಲ್ದಾಣ ಅಭಿವೃದ್ಧಿ ಮಾಡಬೇಕೆಂಬುದು ಸಂಸದ ದಿ.ಸುರೇಶ ಅಂಗಡಿರವರ ಕನಸಿನ ಕೂಸಾಗಿತ್ತು. ಇನ್ನು ಆ ಪ್ರಕಾರ ಕಾಮಗಾರಿಯನ್ನು ಕೂಡ ನಡೆಸಲಾಗುತ್ತಿದೆ. ಇನ್ನು ಕಾಮಗಾರಿ ಪೂರ್ಣಗೊಂಡು ಅವರ ಕನಸು ನನಸಾಗಲಿ. ಇನ್ನು ಬೆಳಗಾವಿ ನಗರ ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಣುತ್ತಿದ್ದು, ಇನ್ನು ರೈಲು ನಿಲ್ದಾಣ ನವೀಕರಣದಿಂದ ಇನ್ನಷ್ಟು ಲುಕ್ ಕಾಣುವುದು ಸತ್ಯ.