ಗ್ಯಾರೇಜ್ ಕೆಲಸ ಮುಗಿಸಿ ವಾಪಸ್ ಮನೆಗೆ ಬರುತ್ತಿದ್ದ ವೇಳೆ ಯುವಕನೊರ್ವನನ್ನು ತಲವಾರ್ ಮತ್ತು ಚಾಕುವಿನಿಂದ ಬರ್ಬರವಾಗಿ ಹಲ್ಲೆ ಮಾಡಿರುವ ಘಟನೆ ಬೆಳಗಾವಿಯ ನ್ಯೂ ಗಾಂಧಿ ನಗರದಲ್ಲಿ ನಡೆದಿದೆ.

ಇಂದು ಗುರುವಾರ ಸಾಯಂಕಾಲ್ 6.30ರ ಸುಮಾರಿಗೆ ನ್ಯೂ ಗಾಂಧಿ ನಗರದಲ್ಲಿ ಐದಾರು ಯುವಕರ ಗುಂಪು ನ್ಯೂ ಗಾಂಧಿ ನಗರ ನಿವಾಸಿಯಾಗಿರುವ ಮೆಕ್ಯಾನಿಕ್ ಕೈಫ ತನ್ವೀರ್ ಬಾಗವಾನ್(20) ಎಂಬ ಯುವಕನ ಮೇಲೆ ತಲವಾರ್ ಮತ್ತು ಚಾಕುವಿನಿಂದ ಬರ್ಬರವಾಗಿ ಹಲ್ಲೆ ಮಾಡಿದ್ದಾರೆ. ಕೈ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿದ್ದು, ಗಾಯಾಳು ಕೈಫನನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮುಸ್ತಾಕ್ ದೇವಲಾಪುರೆ ಎಂಬ ವ್ಯಕ್ತಿಯ ಗ್ಯಾಂಗ್ ಈ ರೀತಿ ಅಟ್ಟಹಾಸ ಮೆರೆದಿದೆ ಎಂದು ಹಲ್ಲೆಗೆ ಒಳಗಾದ ಯುವಕನ ಸಂಬಂಧಿಕರು ಆರೋಪಿಸಿದ್ದಾರೆ. ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
