ಬೆಳಗಾವಿ ಜಿಲ್ಲೆಯಲ್ಲಿಂದು ಮತ್ತೆ ಕೊರೊನಾ ತನ್ನ ಅಟ್ಟಹಾಸ ಮೆರೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು ಒಟ್ಟು 1018 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಬುಲೆಟಿನ್ ಪ್ರಕಾರ ಜಿಲ್ಲೆಯಾದ್ಯಂತ ಒಟ್ಟಾರೆ 1018 ಹೊಸ ಪ್ರಕರಣಗಳು ಪತ್ತೆಯಗಿವೆ. ಇಂದು ಆಸ್ಪತ್ರೆಯಿಂದ 472ಜನ ಗುಣಮುಖರಾಗಿದ್ದಾರೆ. ಇನ್ನು 7893 ಸಕ್ರೀಯ ಪ್ರಕರಣಗಳು ಬಾಕಿ ಇವೆ.
ಇಂದು ಕೊವಿಡ್ ಮಹಾಮಾರಿಯಿಂದಾಗಿ 3ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟಾರೆ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 983ಕ್ಕೆ ಏರಿದೆ.
