Belagavi

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ್ ಕಾಣಿಸುತ್ತಿಲ್ಲ ಹುಡಿಕಿಕೊಡಿ ಪ್ಲೀಸ್: ಸಿದ್ದಗೌಡ ಮೋದಗಿ..!

Share

ಬೆಳಗಾವಿ ನಗರದಲ್ಲಿ ಅಕ್ರಮವಾಗಿ ತಲೆಎತ್ತಿರುವ ಜೈಕಿಸಾನ್ ಭಾಜಿ ಮಾರ್ಕೆಟ್‍ನ್ನು ತೆರವುಗೊಳಿಸಿ ಸರಕಾರಿ ಎಪಿಎಂಸಿ ಮಾರುಕಟ್ಟೆಯನ್ನು ಉಳಿಸಬೇಕೆಂದು ರೈತ ಮುಖಂಡ ಸಿದ್ದಗೌಡ ಮೋದಗಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ. ಇನ್ನು ಇಂದಿನಿಂದ ಸಿದ್ದಗೌಡ ಮೋದಗಿ ಆಮರಣಾಂತ ಉಪವಾಸ ಕೈಗೊಂಡಿದ್ದಾರೆ.

ನಗರದಲ್ಲಿ ಅಕ್ರಮವಾಗಿ ತಲೆಎತ್ತಿರುವ ಜೈಕಿಸಾನ್ ಭಾಜಿ ಮಾರ್ಕೆಟ್‍ನ್ನು ತೆರವುಗೊಳಿಸಿ ಸರಕಾರಿ ಎಪಿಎಂಸಿ ಮಾರುಕಟ್ಟೆಯನ್ನು ಉಳಿಸಬೇಕೆಂದು ರೈತ ಮುಖಂಡ ಸಿದ್ದಗೌಡ ಮೋದಗಿ ನೇತೃತ್ವದಲ್ಲಿ ನಡೆಯುತ್ತಿರುವ ರೈತ ನಾಯಕರು ನಡೆಸುತ್ತಿರುವ ಹೋರಾಟ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ. ಬೆಳಗಾವಿ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ಅಹೋರಾತ್ರಿ ಹೋರಾಟ ಮುಂದುವರೆದಿದೆ. ಖಾಸಗಿ ಮಾರುಕಟ್ಟೆ ಬಂದ್ ಮಾಡಿ ಬೆಳಗಾವಿ ಎಪಿಎಂಸಿ ತರಕಾರಿ ಮಾರುಕಟ್ಟೆ ಉಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲು ಸಿದ್ದಗೌಡ ಮೋದಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಪ್ರಾಂರಂಭಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಮುಖಂಡ ಸಿದ್ದಗೌಡ ಮೋದಗಿರವರು, ಸರಕಾರ ಖಾಸಗಿ ಮಾರುಕಟ್ಟೆಯನ್ನು ಸ್ಥಪಿಸಲು ಕೊಟ್ಟ ಪರವಾನಗಿ ಕಾನೂನುಬಾಹಿರವಾಗಿದೆ. ಈ ಕುರಿತಂತೆ ಸರಕಾರ, ಜಿಲ್ಲಾಡಳಿತಕ್ಕೆ ಮನವಿ ಮಾಡಿದರೆ ಯಾರೂ ಕೂಡ ಮನ್ನಣೆ ನೀಡುತ್ತಿಲ್ಲ. ಇನ್ನು ರೈತರ ಹೋರಾಟಗಳಿಗೆ ಯಾವುದೇ ಬೆಲೆ ಇಲ್ಲ ಎನ್ನುವ ನಿಟ್ಟಿ ಸರಕಾರ ತನ್ ಮೊಂಡುತನವನ್ನು ಪ್ರದರ್ಶನ ಮಾಡುತ್ತಿದೆ. ಸರಕಾರ ತನ್ನ ಒಡೆತನದಲ್ಲಿರು ಸಂಸ್ಥೆಯನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಖಾಸಗಿ ಸರಕಾರಿ ಮಾರುಕಟ್ಟೆಯನ್ನು ಮಾಡುವುದರಿಂದ ರೈತರಿಗೆ ಯಾವುದೇ ರೀತಿಯ ಭದ್ರತೆ ಇರುವುದಿಲ್ಲ. ಹಾಗಾಗಿ ಸರಕಾರ ಕೂಡಲೇ ಈ ಖಾಸಗಿ ಮಾರುಕಟ್ಟೆಯನ್ನು ಬಂದ್ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲಾ ರೈತ ನಾಯಕರ ಪರವಾಗಿ ಹೋರಾಟ ನಡೆಯುತ್ತಿದೆ. ಇಂದಿನಿಂದ ಎಲ್ಲಾ ರೈತರ ಪರವಾಗಿ ನಾನು ಇಂದಿನಿಂದ ರೈತರ ಅನುಕೂಲವಾಗುವ ಸಲುವಾಗಿ ಆಮರಣಾಂತ ಉಪವಾಸ ಕೈಗೊಳ್ಳುತ್ತದ್ದೇನೆ ಎಂದರು.

ಇನ್ನು ಸರಕಾರ ಎಲ್ಲಾ ರೀತಿಯಲ್ಲಿ ವಿಚಾರಣೆ ನಡೆಸಿ ಬಹುಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ನಾವು ಈ ಹೋರಾಟವನ್ನು ರೈತರ ಅನುಕೂಲಕ್ಕಾಗಿ ಮಾಡುತ್ತಿದ್ದೇವೇ ಹೊರತು ಯಾರ ವಿರೋಧವೂ ಇಲ್ಲ. ಖಾಸಗಿ ಮಾರುಕಲಟ್ಟೆಯನ್ನು ಮಾಡಿದವರೂ ಕೂಡ ನಮ್ಮವರೇ. ಆದರೆ ಇತ್ತೀಚೆಗೆ ಅವರ ಬುದ್ದಿ ಕೆಟ್ಟಂತೆ ಕಾಣುತ್ತಿದೆ. ಸರಕಾರಿ ಎಪಿಎಂಸಿ ಇದ್ದಾಗಲೂ ಕೂಡ ಖಾಸಗಿ ಮಾರುಕಟ್ಟೆ ಪ್ರಾರಂಭ ಮಾಡುವುದರಿಂದ ರೈತರಿಗೆ ಹಗೂ ವ್ಯಾಪಾರಸ್ಥರಿಗೆ ತೊಂದರೆ ಯಾಗುತ್ತಿದೆ. ಹಾಗಾಗಿ ಕೂಡಲೇ ಸರಕಾರ ನಮ್ಮೆಲ್ಲರ ಅಭಿಪ್ರಾಯಕ್ಕೆ ಮನವನಣೆ ನೀಡಬೇಕೆಂದು ವೇದಿಕೆಯ ಮೂಲಕ ಮನವಿ ಮಾಡಿದರು.

ಇನ್ನು ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳ ಕುರಿತು ಬೇಸರ ವ್ಯಕ್ತಪಡಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ರೈತರ ಕುರಿತಂತೆ ಸ್ವಲ್ಪವೂ ಕಾಳಜಿ ಇಲ್ಲ. ತಳೀಯ ಬಿಜೆಪಿ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೇ ಇದರಲ್ಲಿ ಶಾಮೀಲಾಗಿದ್ದಾರೆ. ಇನ್ನ ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನು ಬೆಳಗಾವಿ ಜಿಲ್ಲೆಯವರಿಗೆ ನೀಡದೇ ಬಾಗಲಕೋಟೆ ಜಿಲ್ಲೆಯವರಾದ ಗೋವಿಂದ ಕಾರಜೋಳ್ ರವರಿಗೆ ನೀಡಿದ್ದಾರೆ. ಇನ್ನು ಬೆಳಗಾವಿಯಲ್ಲಿ ಏನಾಗುತ್ತಿದೆ ಎಂದು ಅವರಿಗೆ ಗೊತ್ತಾಗುತ್ತಿಲ್ಲ. ಹಾಗಾಗಿ ಬೆಳಗಾವಿ ಉಸ್ತುವಾರಿ ಸಚಿವರು ಕಾಣಿಸುತ್ತಿಲ್ಲ ದಯಮಾಡಿ ಹುಡುಕಿಕೊಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು.

Tags:

error: Content is protected !!