Belagavi

ಬೆಳಗಾವಿ ಗಡಿಯಲ್ಲಿ ಆರ್‍ಟಿಪಿಸಿಆರ್ ಟೆಸ್ಟ್ ಸೆಂಟರ್ ತೆರವುಗೊಳಿಸಿ: ಡಿಸಿಗೆ ಟ್ರೇಡರ್ಸ ಫೋರಂ ಮನವಿ

Share

ಗಡಿ ಭಾಗದಲ್ಲಿ ಕೋವಿಡ್ ಆರ್‍ಟಿಪಿಸಿಆರ್ ಪರೀಕ್ಷಾ ಕೇಂದ್ರಗಳನ್ನು ತೆರವುಗೊಳಿಸುವಂತೆ ಬೆಳಗಾವಿಯ ಉದ್ಯಮಿಗಳು ಜಿಲ್ಲಾಧಿಕಾರಗಳನ್ನು ಭೇಟಿಯಾಗಿ ಮನವಿ ಮಾಡಿಕೊಂಡರು.

ಬುಧವಾರ ಬೆಳಗಾವಿ ಡಿಸಿ ಮಹಾಂತೇಶ ಹಿರೇಮಠ ಅವರನ್ನು ಭೇಟಿಯಾದ ಬೆಳಗಾವಿಯ ಟ್ರೇಡರ್ಸ ಫೋರಂ ಪದಾಧಿಕಾರಿಗಳು ಈ ಬಗ್ಗೆ ಮನವಿ ಸಲ್ಲಿಸಿದರು. ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಟ್ರೇಡರ್ಸ ಫೋರಂ ಅಧ್ಯಕ್ಷ ಸತೀಶ ತೆಂಡೂಲ್ಕರ್ ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಗಡಿಯಲ್ಲಿ ಆರ್‍ಟಿಪಿಸಿಆರ್ ಪರೀಕ್ಷೆ ಮಾಡುತ್ತಿಲ್ಲ.

ಅದೇ ರೀತಿ ಎಲ್ಲಾ ಕಡೆ ಕೇಸ್‍ಗಳು ಕಡಿಮೆ ಬರುತ್ತಿವೆ. ಹೀಗಾಗಿ ನಮ್ಮ ಬೆಳಗಾವಿ ಜಿಲ್ಲೆಯ ಗಡಿಯಲ್ಲಿ ಆರ್‍ಟಿಪಿಸಿಆರ್ ಟೆಸ್ಟ್ ಮಾಡುವುದರಿಂದ ನಮ್ಮ ಉದ್ಯಮದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಹೀಗಾಗಿ ಆರ್‍ಟಿಪಿಸಿಆರ್ ಪರೀಕ್ಷಾ ಕೇಂದ್ರಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವಿಕಾಸ್ ಕಲಘಟಗಿ, ಸೇವಂತಿಲಾಲ್ ಶಹಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!