ಬೆಳಗಾವಿಯ ರಾಣಿ ಚೆನ್ನಮ್ಮ ನಗರದ ನಿವೇದಾರ್ಪಣ ಅಕಾಡೆಮಿ ವತಿಯಿಂದ “ಹಾಡು ಕನ್ನಡ ನಲಿದಾಡು ಕನ್ನಡ “ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ನಿನ್ನೆ ರವಿವಾರ ಕೊನವಾಳ ಬೀದಿಯ ಲೋಕಮಾನ್ಯ ಭವನದಲ್ಲಿ “ಹಾಡು ಕನ್ನಡ ನಲಿದಾಡು ಕನ್ನಡ” ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ 40 ಗಾಯಕರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಐವರು ಅತ್ಯುತ್ತಮ ಗಾಯಕರಿಗೆ ಬಹುಮಾನ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಆಗಮಿಸಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಗಾಯಕಿ ಹಾಗೂ ಅಕಾಡೆಮಿಯ ಮುಖ್ಯಸ್ಥೆ ನಿವೇದಿತಾ ಚಂದ್ರಶೇಖರ ಹಾಗೂ ಅಕಾಡೆಮಿಯ ಇತರ ಸದಸ್ಯರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಎರಡು ಗಂಟೆಗಳ ಕಾಲ ನಡೆದ ಸಂಗೀತ ಕಾರ್ಯಕ್ರಮ ಎಲ್ಲರ ಮನಸೂರೆಗೊಳಿಸಿತು.