State

ಬದಲಾಗುತ್ತಿದೆ ಗೂಗಲ್ ಕ್ರೋಮ್ ಲೋಗೊ…!!!

Share

ಇದೀಗ ಜನಪ್ರಿಯ ಗೂಗಲ್ ಕ್ರೋಮ್ನಲ್ಲಿಯೂ ಬದಲಾವಣೆಯಾಗಿದೆ. 2014 ರ ನಂತರ ಗೂಗಲ್ ಕ್ರೋಮ್ ತನ್ನ ಲೋಗೋವನ್ನು ಬದಲಾಯಿಸುತ್ತಿದೆ. ಕ್ರೋಮ್ಗಾಗಿ ಕೆಲಸ ಮಾಡುವ ಡಿಸೈನರ್ ಎಲ್ವಿನ್ ಹು ಅವರು ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಹೊಸ ಲೋಗೋದ ಚಿತ್ರವನ್ನು ಶೇರ್ ಮಾಡಿದ್ದಾರೆ.

8 ವರ್ಷಗಳಲ್ಲಿ ಮೊದಲ ಬಾರಿಗೆ ಕ್ರೋಮ್ ನ ಬ್ರ್ಯಾಂಡ್ ಐಕಾನ್ ಅನ್ನು ರಿಫ್ರೆಶ್ ಮಾಡಲಾಗಿದೆ ಎಂದು ಎಲ್ವಿನ್ ಟ್ವೀಟ್ ಮಾಡಿದ್ದಾರೆ. ಹೊಸ ಐಕಾನ್ ಶೀಘ್ರದಲ್ಲೇ ಕಾಣಸಿಗಲಿದೆ. ಹೊಸ ಲೋಗೋದಲ್ಲಿ, ಮೂರು ಬಣ್ಣಗಳು – ಕೆಂಪು, ಹಳದಿ ಮತ್ತು ಹಸಿರು ಬಣ್ಣಗಳಿವೆ. ಅಲ್ಲದೆ, ಮಧ್ಯದಲ್ಲಿ ನೀಲಿ ವೃತ್ತವು ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಗೋಚರಿಸಲಿದೆ.

ಹಸಿರು ಮತ್ತು ಕೆಂಪು ಬಣ್ಣಗಳನ್ನು ಅಕ್ಕಪಕ್ಕದಲ್ಲಿ ಹಾಕುವುದು ವಿಚಿತ್ರವಾದ ಭಾವನೆಯನ್ನು ನೀಡುತ್ತದೆ ಎಂದು ಅವರು ತಮ್ಮ ಟ್ವಿಟರ್ನಲ್ಲಿ ಬರೆದಿದ್ದಾರೆ., ಆದ್ದರಿಂದ ಅವರ ಟೀಂ ಮ್ಯಾನ್ ಐಕಾನ್ಗಾಗಿ ಅಂತಹ ವಿನ್ಯಾಸವನ್ನು ರೂಪಿಸಿದೆ.

Tags:

error: Content is protected !!