Belagavi

ಪಾಲಿಕೆ ಕಂದಾಯ ಅಧಿಕಾರಿಯ ವಿರುದ್ಧ ಪಾಲಿಕೆ ಸಿಬ್ಬಂದಿ ಪ್ರತಿಭಟನೆ..!

Share

ಬೆಳಗಾವಿಯ ಮಹಾನಗರ ಪಾಲಿಕೆ ಕಂದಾಯ ಇಲಾಖೆಯ ಅಧಿಕಾರಿ ಎಸ್.ಬಿ.ದೊಡಗೌಡರ್ ರವರು ಪಾಲಿಕೆ ಆಯುಕ್ತರು ಹಾಗೂ ಕೆಲ ಅಧಿಕಾರಿಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಮಾನ್ಯ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದಾರೆ ಎಂದು ಕ್ರೋಧಗೊಂಡ ಪಾಲಿಕೆ ನೌಕರರು ಇಂದು ಎಸ್.ಬಿ.ದೊಡಗೌಡರ್ ವಿರುದ್ಧ ಪ್ರತಿಭಟನೆ ನಡೆಸಿದರು.

ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿ ಎಸ್.ಬಿ.ದೊಡಗೌಡರ್‍ರವರು ಪಾಲಿಕೆಯ ಆಯುಕ್ತರು ಹಾಗೂ ಕೆಲ ಅಧಿಕಾರಿಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮಾನ್ಯ ಪ್ರಾದೇಶಿಕ ಆಯುಕ್ತರಿಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ದೂರು ನೀಡಿದ್ದಾರೆ ಎಂದು ಪಾಲಿಕೆಯ ಎಸ್.ಸಿ ಹಾಗೂ ಎಸ್‍ಟಿ. ನೌಕರರ ಸಂಘ ಹಾಗೂ ಇತರೆ ನೌಕರರು ಆಕ್ರೋಶ ವ್ಯಕ್ತಪಡಿಸಿ, ತಮ್ಮ ಕರ್ತವ್ಯಕ್ಕೆ ಹಾಜರಾಗದೇ ಪಾಲಿಕೆಯ ಮುಂಭಾಗ ಸಾಂಕೇತಿಕ ಧರಣಿ ನಡೆಸಿದರು.

ಈ ವೇಳೆ ಮತನಾಡಿದ ಪಾಲಿಕೆಯ ಗುಂಡಪ್ಪನವರ್ ಎಂಬವರು, ಬೆಳಗಾವಿ ಪಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳಾದ ಎಸ್.ಬಿ ದೊಡಗೌಡರ್, ಪಾಲಿಕೆ ಆಯುಕ್ತರು ಹಾಗೂ ಕೆಲ ಅಧಿಕಾರಿಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದಾರೆ. ಹಾಗಾಗಿ ಅವರು ಅಧಿಕಾರಿಗಳು ಹಾಗೂ ಆಯುಕ್ತರ ಮೇಲೆ ಮಾಡಿದ ಆರೋಗಳಲ್ಲಿ ಯಾವುದರಲ್ಲಿಯೂ ಹುರುಳಿಲ್ಲ. ಇನ್ನು ಎಸ್.ಬಿ ದೊಡಗೌಡರ್‍ರವರನ್ನು ವರ್ಗಾವಣೆಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಅವರನ್ನು ವರ್ಗಾವಣೆ ಮಾಡುವವರೆಗೂ ನಾವು ಜಾಗ ಬಿಟ್ಟು ಕದಲುವುದಿಲ್ಲ ಎಂದರು.

ಇದೇ ವೇಳೆ ಮಾತನಾಡಿದ ಪಾಲಿಕೆ ಸಿಬ್ಬಂದಿ ವಿಜಯ್ ಕೊಟ್ಟೂರು, ಎಸ್.ಬಿ ದೊಡಗೌಡರ್ ಪಾಲಿಕೆ ಆಯುಕ್ತರು ಹಾಗೂ ಕೆಲ ಸಿಬ್ಬಂದಿಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇನ್ನು ಕೆಳ ಹಂತದ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಹಾಗಾಗಿ ಅವರನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಇನ್ನೋರ್ವ ಪಾಲಿಕೆ ಸಿಬ್ಬಂದಿ ಮಂಜೂಶ್ರೀ, ನಮ್ಮ ಪಾಲಿಕೆ ಸಿಬ್ಬಂದಿ ಹಾಗೂ ಆಯುಕ್ತರ ಮೇಲೆ ಕಂದಾಯ ವಿಭಾಗದ ಅಧಿಕಾರಿಗಳಾದ ಎಸ್.ಬಿ. ದೊಡಗೌಡರ್ ಇಲ್ಲ ಸಲ್ಲದ ಆರೋಗಳನ್ನು ಮಾಡಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅವರು ಈ ರೀತಿ ತಪ್ಪಾಗಿ ದೂರು ದಾಖಲಿಸಿದ್ದಾರೆ. ನಮ್ಮೆಲ್ಲರನ್ನು ಉತ್ತಮವಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಪಾಲಿಕೆಯ ಆಯುಕ್ತರಾದ ರುದೇಶ ಘಾಳಿ ಪ್ರೇರೇಪಿಸುತ್ತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೊಡಗೌಡರ್ ರವರು ಇಂತಹ ಸಮಯದಲ್ಲಿ ಈ ರೀತಿ ಮಾಡಿ ಪಾಲಿಕೆಯ ಗೌರವವನ್ನು ಕಳೆಯುತ್ತಿದ್ದಾರೆ. ಹಾಗಾಗಿ ಅವರನ್ನು ಇಲ್ಲಿಂದ ವರ್ಗಾವಣೆ ಮಾಡುವಂತೆ ಪಾಲಿಕೆಯ ಎಲ್ಲಾ ಸಿಬ್ಬಂದಿ ಕಾರ್ಯಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ಇನ್ನ ಬೆಳಗಾವಿ ಪಾಲಿಕೆ ಆಯುಕ್ತರಾದ ರುದ್ರೇಶ ಘಾಳಿ ಈ ಕುರಿತಂತೆ ಮಾತನಾಡಿ, ಕಂದಾಯ ಶಾಖೆಯ ಅಧಿಕಾರಿಗಳಾದ ಎಸ್.ಬಿ ದೊಡಗೌಡರ್‍ರವರು ಪಾಲಿಕೆಯ ಸಿಬ್ಬಂದಿಯ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಹಿಂದೆಯೇ ಹಲವಾರು ಬಾರಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಪಾಲಿಕೆಯ ಸಿಬ್ಬಂದಿ ನನಗೆ ಮನವಿ ಮಾಡಿದ್ದರು. ಹಾಗಾಗಿ ಇಂದು ಪಾಲಿಕೆಯ ಸಿಬ್ಬಂದಿ ಅವರ ವಿರುದ್ಧ ಆರೋಪಗಳನ್ನು ಮಾಡಿದ್ದು ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗಾಗಿ ಎಲ್ಲ ಸಿಬ್ಬಂದಿಗಳು ಪ್ರತಿಭಟನೆಯನ್ನು ಕೈಬಿಡಬೇಕು. ದೊಡಗೌಡರ್‍ರವರ ಆರೋಪ ಕುರಿತಂತೆ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಜಿಲ್ಲಾಧಿಕಾರಿಗಳು, ಹಾಗೂ ಪ್ರಾದೇಶಿಕ ಆಯುಕ್ತರಿಗೆ ನಾನು ಭೇಟಿ ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ. ಹಾಗಾಗಿ ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿದರು.

ಇನ್ನು ತಮ್ಮ ಮೇಲೆ ಹಾಗೂ ಪಾಲಿಕೆಯ ಉಪ ಆಯುಕ್ತರಾದ ಲಕ್ಷ್ಮೀ ನಿಪ್ಪಾಣಿಕರ್ ಏಲೆ ಎಸ್.ಬಿ. ದೊಡಗೌಡರ್ ಮಾಡಿರುವ ಆರೋಪ ಕುರಿತಂತೆ ಮಾತನಾಡಿದ ಅವರು, ನಮ್ಮ ಮೇಲೆ ಆರೋಪ ಮಾಡಿರುವ ವಿಷಯ ಕುರಿತಂತೆ ನನಗೆ ತಿಳಿದಿರಲಿಲ್ಲ. ಆದರೆ ಮಾಧ್ಯಮಗಳ ಮೂಲಕ ಈ ವಿಷಯ ನನಗೆ ತಿಳಿದಿದೆ. ಇನ್ನು ಪಾಲಿಕೆ ಸಿಬ್ಬಂದಿಯಾಗಲೀ ಅಥವಾ ಸಾರ್ವಜನಿಕರಿಂದಾಗಲೀ ದೊಡಗೌಡರ್ ಮೇಲೆ ಉತ್ತಮ ಅಭಿಪ್ರಾಯ ಕೇಳಿಬಂದಿಲ್ಲ. ಇನ್ನು ತಮ್ಮ ಮೇಲೆ ಆರೋಪ ಮಾಡಿದಕ್ಕಾಗಿ ಪಾಲಿಕೆ ಸಿಬ್ಬಂದಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ನಮ್ಮ ಸಿಬ್ಬಂದಿಗೆ ಪ್ರಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಗದಂತೆ ನಾನು ಕ್ರಮ ಕೈಗೊಳ್ಳುವತ್ತೇವೆ ಎಂದರು.

ಇನ್ನು ಪಾಲಿಕೆ ಕಂದಾಯ ವಿಭಾಗದ ಅಧಿಕಾರಿ ಎಸ್,ಬಿ ದೊಡಗೌಡರ್ ಮಾಡಿದ ಆರೋಪ ಸತ್ಯಕ್ಕೆ ದೂರಾವಗಿದೆ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆಯ ಇಬ್ಬಂದಿಯು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಪಾಲಿಕೆ ಆಯುಕ್ತರು, ನಾನು ಈ ಕುರಿತಂತೆ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತತೇನೆ ಎಂದು ಹೇಳಿದ್ದಾರೆ. ಇನ್ನು ಈ ಕುರಿತಂತೆ ಪಾಲಿಕೆ ಸಿಬ್ಬಂದಿಯ ನಡೆ ಏನು ಎಂದು ಕಾದು ನೋಡಬೇಕಿದೆ.

Tags:

error: Content is protected !!