Belagavi

ನಾಳೆ ಬೆಳಗಾವಿಯಲ್ಲಿ ಮುಖವಾಡ 008-ಭಾಗ 2 ಸಿನಿಮಾ ಶೂಟಿಂಗ್ ಆರಂಭ

Share

ಬೆಳಗಾವಿಯ ಸುಳಗಾ ಗ್ರಾಮದ ಗಣಪತ ಪಾಟೀಲ್ ಅವರ ಓಂ ನಮಃ ಶಿವಾಯ ಮೂವೀಸ್ ನಿರ್ಮಾಣದ ಬಹು ನಿರೀಕ್ಷಿತ ಮುಖವಾಡ 008-ಭಾಗ 2 ಚಿತ್ರದ ಚಿತ್ರೀಕರಣ ಶನಿವಾರದಿಂದ ಬೆಳಗಾವಿಯಲ್ಲಿ ಆರಂಭವಾಗುತ್ತಿದೆ.

ಹೌದು ಮುಖವಾಡ ಇಲ್ಲದವನು 84 ಕನ್ನಡ ಚಿತ್ರ ಕಳೆದ ವರ್ಷ ರಾಜ್ಯದ ಸುಮಾರು 60 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದಿತ್ತು. ಆಧ್ಯಾತ್ಮ ಮತ್ತು ಮನುಷ್ಯನ ಹೊರ ಮತ್ತು ಅಂತರ್ ಸ್ವಭಾವವಗಳ ಮೇಲೆ ಬೆಳಕು ಚೆಲ್ಲುವ ಕಥಾಹಂದರವನ್ನು ಮುಖವಾಡ 008-ಭಾಗ 2 ಚಿತ್ರಕಥೆ ಹೊಂದಿದೆ. ಬೆಳಗಾವಿ, ಮಡಿಕೇರಿ, ಮೈಸೂರು, ಕೋಲಾರ ಸೇರಿದಂತೆ ಮುಂತಾದ ಕಡೆಗಳಲ್ಲಿ ಶೂಟಿಂಗ್ ನಡೆಯಲಿದೆ.

ಈ ಸಂಬಂಧ ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಿತ್ರದ ನಿರ್ಮಾಪಕ ಗಣಪತ್ ಪಾಟೀಲ್ ಮನುಷ್ಯನ ರೂಪ, ಎಲ್ಲರ ಕಡೆ ಪಾಸಿಟಿವ್, ನೆಗೆಟಿವ್ ವಿಚಾರಗಳು ಇರುತ್ತವೆ. ಎಲ್ಲರ ವಿಚಾರ ಶಕ್ತಿ ಬೇರೆ ಬೇರೆ ಇರುತ್ತದೆ. ಇವುಗಳೆಲ್ಲವನ್ನು ಸೇರಿಸಿ ಅದರ ತೀರ್ಪು ಏನು ಬರುತ್ತದೆ ಎನ್ನುವುದು ಸಿನಿಮಾದ ಕೊನೆಗೆ ತಿಳಿಸಿದ್ದೇವೆ.

ವ್ಯಕ್ತಿ ಒಬ್ಬನೇ ಆದರೆ ಅವರಲ್ಲಿ ಪಾಸಿಟಿವ್, ನೆಗೆಟಿವ್ ವಿಚಾರಗಳು ಇರುತ್ತವೆ. ಇವುಗಳನ್ನೇ ನಮ್ಮ ಸಿನಿಮಾದಲ್ಲಿ ತೋರಿಸುವ ಕೆಲಸ ಮಾಡುತ್ತಿದ್ದೇವೆ. ಈ ಚಿತ್ರವು 10 ಶೇಡ್‍ಗಳಲ್ಲಿ ತೆರೆದುಕೊಳ್ಳಲಿದ್ದು, ತೆಲುಗಿನ ನಾಯಕಿ ಸೋನಾ ರೈ ಕೂಡ ಚಿತ್ರದ ಪ್ರಮುಖ ಆಕರ್ಷಣೆ ಆಗಿದ್ದಾರೆ. ಬೆಳಗಾವಿಯ ಹಲವಾರು ಪ್ರತಿಭೆಗಳಿಗೆ ಈ ಸಿನಿಮಾದಲ್ಲಿ ಅವಕಾಶ ಕೊಡುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಶಿವಕುಮಾರ್(ಕಡೂರ), ಸಹಾಯಕ ನಿರ್ದೇಶಕ ಹರೀಶ ಸಾರಾ, ಛಾಯಾಗ್ರಾಹಕ ಗಿರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!