ಬೆಳಗಾವಿಯ ಹಿಂದೂ ಜನ ಜಾಗೃತಿ ಸಮಿತಿ ವತಿಯಿಂದ ನಾಣ್ಯಗಳ ಬಗ್ಗೆ ಜಾಗೃತಿ ಮೂಡಿಸುವಂತ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಬೆಳಗಾವಿಯ ಹಮಾರಾ ಫೆಸ್ ಸಂಘಟಣೆ ಮತ್ತು ಹಿಂದೂ ಜನ ಜಾಗೃತಿ ಸಮಿತಿಯ ವತಿಯಿಂದ ಸರ್ಕಾರ ನಾಣ್ಯಗಳನ್ನು ಬಹಿಷ್ಕಾರ ಮಾಡಿಲ್ಲ ಆದರೂ ಕೂಡ ಕೆಲವೊಂದು ವರ್ತಕರು ನಾಣ್ಯಗಳನ್ನು ತೆಗೆದುಕೊಳ್ಳದಿರುವ ಕಾರಣ ಜಿಲ್ಲಾಧಿಕಾರಿಗಳು ನಾಣ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಮಲ್ಲಿಕಾರ್ಜುನ ಕೋಕಣಿ ಅವರು ಮಾತನಾಡಿ ಹಮಾರಾ ಫೆಸ್ ಸಂಘಟಣೆ ಹಿಂದೂ ಜನ ಜಾಗೃತಿ ಸಮತಿಯ ಪರವಾಗಿ ಬಂದಿದ್ದೇನೆ. ಸದ್ಯದಲ್ಲಿ 10 ರೂಪಾಯಿಯ ನಾಣ್ಯಗಳು ಜನರಲ್ಲಿ ಬಹಳಷ್ಟು ಜಮಾವಣೆಯಾಗಿವೆ. ನೋಟುಗಳು ಹಾಳಾಗಿ ಹೋಗುತ್ತವೆ ಆದರೆ ನಾಣ್ಯ ಗಳು ಬಹಳಷ್ಟು ಸಮಯ ಚಾಲ್ತಿಯಲ್ಲಿರುತ್ತದೆ. ಅದು ಎಲ್ಲರಿಗೂ ಅನುಕೂಲವಾಗುತ್ತದೆ. ಸರ್ಕಾರವೂ ಕೂ ಈ ನಾಣ್ಯಗಳನ್ನು ಬ್ಯಾನ್ ಮಾಡಿಲ್ಲ ಆದರೂ ಸಹ ವರ್ತಕರು ಈ ನಾಣ್ಯವನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದು, ಅದಕ್ಕಾಗಿ ಯಾರೂ ನಾಣ್ಯಗಳನ್ನು ತೆಗೆಯುವುದಿಲ್ಲ ಅಂತವರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ.
ಒಟ್ಟಿನಲ್ಲಿ ಸರ್ಕಾರ ಆಗಲಿ ಇಲ್ಲ ಆರ್‍ಬಿಐ ದಿಂದ ನಾಣ್ಯಗಳನ್ನು ಬ್ಯಾನ್ ಮಾಡಿರುವ ಯಾವುದೇ ರೀತಿಯ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ನಾಣ್ಯಗಳನ್ನು ತೆಗೆದುಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದರು.