ಧಾರವಾಡ–ಕಿತ್ತೂರು – ಬೆಳಗಾವಿ ನೂತನರೈಲ್ವೆ ಮಾರ್ಗದ ಪ್ರಕಲ್ಪಕ್ಕೆಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ 20 ಕೋಟಿರೂಪಾಯಿ ಬಿಡುಗಡೆ ಮಾಡಿದೆಎಂದು ಬೆಳಗಾವಿ ಸಂಸದೆ ಮಂಗಲ ಅಂಗಡಿ ತಿಳಿಸಿದರು.
ಶನಿವಾರ ಸಂಜೆ ಬೆಳಗಾವಿ ನಗರದಲ್ಲಿಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನ ಉದ್ಧೇಶಿಸಿ ಅವರು ಮಾತನಾಡುತ್ತಿದ್ದರು.

ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ 20 ಕೋಟಿರೂಪಾಯಿ ಬಿಡುಗಡೆ ಮಾಡಿದೆ.ನಿರ್ಧಾರಿತ ಸಮಯದಲ್ಲಿಯೋಜನೆಯಕಾಮಗಾರಿಯನ್ನ ಪೂರ್ಣಗೊಳಿಸಲಾಗುವುದು.ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆಆರಂಭಗೊಂಡಿದೆ.ಭೂಮಿ ಕಳೆದುಕೊಂಡವರಿಗೆ ಪರಿಹಾರಕೂಡ ವಿತರಿಸಲಾಗುತ್ತಿದೆ.ಯಾವರೈತರುಯೋಜನೆಗೆ ವಿರೋಧ ವ್ಯಕ್ತಪಡಿಸಿಲ್ಲವೆಂದರು.
ಸುರೇಶಅಂಗಡಿರೈಲ್ವೆರಾಜ್ಯ ಸಚಿವರಾಗಿದ್ದ ವೇಳೆ ಧಾರವಾಡಕಿತ್ತೂರು ಬೆಳಗಾವಿ ನೂತನರೈಲ್ವೆಯೋಜನೆಗೆ ಸಂಬಂಧಿಸಿದಂತೆ ಸಮಗ್ರ ವರದಿ ಸಲ್ಲಿಸಿದ್ದರು.ಈ ವರದಿಯನ್ನ ಮತ್ತೇ ಮರು ಪರಿಶೀಲಿಸಿದರೇ, ಮತ್ತೆ 250 ಕೋಟಿರೂಪಾಯಿಅತ್ಯವಶ್ಯವಾಗಿದೆ.ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಮನ್ ಅವರು 2022-2023ನೇ ಸಾಲಿನ ಉತ್ತಮ ಬಜೆಟ್ ಮಂಡಿಸಿದ್ದಾರೆ.ಕೈಗಾರಿಕೆ, ಕೃಷಿ ಉತ್ಪಾದನೆ, ರಸ್ತೆಕುಡಿಯುವ ನೀರು, ಗ್ರಾಮೀಣಕ್ಷೇತ್ರದಅಭಿವೃದ್ಧಿಗೆಒತ್ತು ನೀಡಲಾಗಿದೆ.ಕಳೆದ ಬಾರಿಗಿಂತ ಈ ಬಾರಿಕರ್ನಾಟಕಕ್ಕೆ 50% ಅನುದಾನದೊರೆತಿದೆ.
ಈ ವೇಳೆ ರಾಜ್ಯಸಭಾ ಸದಸ್ಯಈರಣ್ಣಕಡಾಡಿ, ಮಾಜಿ ಶಾಸಕ ಮತ್ತು ಬಿಜೆಪಿ ಗ್ರಾಮೀಣಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಇನ್ನುಳಿದವರು ಉಪಸ್ಥಿತರಿದ್ಧರು.