ದೆಹಲಿಯ ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಸಚವ ಕೆ.ಎಸ್ ಈಶ್ವರಪ್ಪ ಹೇಳಿಕೆ ಕುರಿತಂತೆ ಸದನದಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ. ಕೆ.ಎಸ್ ಈಶ್ವರಪ್ಪ ಒಬ್ಬ ದೇಶದ್ರೋಹಿ ಎಂದು ಶೇಮ್ ಶೇಮ್ ಎಂದು ಸದನದ ಕೆಲ ಸದಸ್ಯರು ಧ್ವನಿಗೂಡಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಸದನದಲ್ಲಿ ಸಚಿವ ಕೆಎಸ್ ಈಶ್ವರಪ್ಪ ಹೇಳಿಕೆ ಕುರಿತಂತೆ ಧ್ವನಿ ಎತ್ತಿದ್ದಾರೆ. ದೆಹಲಿಯ ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿದ್ದ ಈಶ್ವರಪ್ಪ ಹೇಳಿಕೆಯನ್ನು ಪ್ರಸ್ತಾಪಿಸುತ್ತಲೇ ಸದನದಲ್ಲಿ ಕೆಲ ಸದಸ್ಯರು ಶೇಮ್ ಶೇಮ್, ಅವರು ದೇಶದ್ರೋಹಿ ಎಂದು ಕೂಗಿದರು. ಮಾತು ಮುಂದುವರೆಸಿ ಸಿದ್ಧರಾಮಯ್ಯನವರು, ಇಂಥ ಹೇಳಿಕೆಯನ್ನು ನಾನು ನೀಡಿದರೂ ಇನ್ಯಾರೇ ನೀಡಿದರು ಅದು ತಪ್ಪು. ಇನ್ನು ದೆಹಲಿ ನಮ್ಮ ರಾಷ್ಟ್ರದ ರಾಜಧಾನಿ. ಅಲ್ಲಿನ ಕೆಂಪು ಕೋಟೆಯ ಮೇಲೆ ಯಾವಾಗಲೂ ನಮ್ಮ ರಾಷ್ಟ್ರಧ್ವಜ ಹಾರಾಡುತ್ತದೆ.
ಅಲ್ಲಿ ಬೇರೆ ಧ್ವಜ ಹಾರಾಡಲು ಸಾಧ್ಯವೇ ಇಲ್ಲ. ಸಾರ್ವಜನಿಕವಾಗಿ ಇಂಥಹ ಮಾತುಗಳನ್ನಾಡುವುದು ಹಾಗೂ ಲಿಖಿತವಾಗಿ ನೀಡುವುದು ಹಾಗೂ ಕ್ರಿಯೆಯ ಮೂಲಕ ತೋರಿಸುವುದು ದೇಶದ್ರೋಹದ ಕಾರ್ಯವಾಗುತ್ತದೆ. ಎಂದು ಕಾನೂನು ಹಾಗೂ ದಂಡ ಸಂಹಿತೆ ಹೇಳುವ ಶಿಕ್ಷಯನ್ನು ಕೂಡ ಪ್ರಸ್ತಾಪಿಸಿದರು.
ಇನ್ನು ಕೇಸರಿ ಧ್ವಜ ಹಾರಿಸುವ ಕುರಿತಂತೆ ಸಚಿವ ಈಶ್ವರಪ್ಪ ನೀಡಿದ್ದ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಇನ್ನು ಮಾಜಿ ಸಿ.ಎಂ ಸಿದ್ಧರಾಮಯ್ಯ ಸಚಿವ ಈಶ್ವರಪ್ಪ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಧಾಟಿಯಲ್ಲಿ ಮಾತನಾಡಿದ್ದಾರೆ. ಇನ್ನು ಈ ಕುರಿತಂತೆ ಸರಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.