Belagavi

ಯಾವುದೇ ಕಾರಣಕ್ಕೂ ಸಿ.ಟಿ. ರವಿಯನ್ನು ಕ್ಷಮಿಸಲ್ಲ…

Share

ಸಿ.ಟಿ. ರವಿ ಅವರಿಗೆ ಎಷ್ಟು ಹೊಲಿಗೆಗಳು ಬಿದ್ದಿವೆ? ಅವರ ಮಾತಿನಿಂದ ನನ್ನ ಮನಸ್ಸಿಗೆ ನೋವಾಗಿದೆ. ಯಾವುದೇ ಕಾರಣಕ್ಕೂ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಸಿ.ಟಿ. ರವಿ ಅವರಿಗೆ ಶಿಕ್ಷೆಯಾಗುವ ವರೆಗೂ ಲಕ್ಷ್ಮೀ ಹೆಬ್ಬಾಳ್ಕರ ಸುಮ್ಮನೆ ಕೂರಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಆನೆಯ ತಿನ್ನುವ ಹಲ್ಲುಗಳು ಬೇರೆ. ತೋರಿಸುವ ಹಲ್ಲುಗಳು ಬೇರೆ ಎಂಬಂತೆ, ಬಿಜೆಪಿ ಹೇಳುವುದು ಒಂದು , ಮಾಡುವುದು ಇನ್ನೊಂದು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದ ಪಿಎಂ ಮೋದಿ ಅವರು ನನಗೆ ಉತ್ತರಿಸಲಿ. ರಾಮರಾಜ್ಯದಲ್ಲಿ ಮಹಿಳೆಯರ ನಿಂದನೆಗೆ ಅವಕಾಶವಿದೆಯೇ? ನಿಮ್ಮದೇ ಪಕ್ಷದ ಎಂ.ಎಲ್.ಸಿ ಸದನದಲ್ಲಿ ಅಪಶಬ್ದವನ್ನು ಬಳಸಿದ್ದಾರೆ. ಇದಕ್ಕೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದರು. ಬೈಟ್

ರಾಜಕಾರಣದಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ತರುತ್ತಿದ್ದೀರಿ. ಇಂತಹ ಘಟನೆಗಳು ನಡೆದರೇ ಯಾವ ಮಹಿಳೆ ರಾಜಕಾರಣಕ್ಕೆ ಬರುತ್ತಾಳೆ? ಮಹಿಳೆಯರನ್ನು ಹೆದರಿಸಿ ಬೆದರಿಸಿದರೇ ಮಹಿಳೆಯರು ರಾಜಕಾರಣವನ್ನು ಬಿಟ್ಟು ಹೋಗಲಿದ್ದಾರೆಂಬ ತಪ್ಪು ಕಲ್ಪನೆಯಲ್ಲಿ ಇರದಿರಿ. ಸಿ.ಟಿ ರವಿ ಹೇಳಿರುವುದು ತಪ್ಪು. ನ್ಯಾಯ ಸಿಗುವವರೆಗೂ ನನ್ನ ಹೋರಾಟ ನಡೆಯಲಿದೆ. ಸಭಾಪತಿಗಳು ಮರುಪರಿಶೀಲನೆ ನಡೆಸುತ್ತೇನೆಂದು ಎಂದಿದ್ದಾರೆ. ಅವರಿಗೆ ಬೇಕಾದ ಸಾಕ್ಷಿ ಪುರಾವೆಗಳು ತಮ್ಮ ಬಳಿಯಿದ್ದು, ಅವುಗಳನ್ನು ನೀಡುತ್ತೇನೆ ಎಂದರು.

ಬಿಜೆಪಿಯಲ್ಲಿನ ವರಿಷ್ಠ ನಾಯಕರು ರಾಜಕಾರಣಕ್ಕಾಗಿ ಓರ್ವ ಮಹಿಳೆಯನ್ನು ನಿಂದಿಸಿದವರನ್ನು ಬೆಂಬಲಿಸುತ್ತಿರುವುದರನ್ನು ನೋಡಿದರೇ ಮರುಕ ಹುಟ್ಟುತ್ತದೆ. ಬಾಯಿ ತೆರೆದರೇ ರಾಮ ರಾಮ ಅನ್ನುವವ ಬಿಜೆಪಿಗರಿಗೆ ನಾಚಿಕೆಯಾಗಬೇಕು. ಸಿ.ಟಿ. ರವಿ ಅವರಿಗೆ ಆತ್ಮಸಾಕ್ಷಿಯಿದೇಯೇ? ಎಂದು ಪ್ರಶ್ನಿಸಿದರು. ಯಾವುದೇ ಕಾರಣಕ್ಕೂ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಸಿ.ಟಿ. ರವಿ ಅವರಿಗೆ ಏನಾಗಿದೆ ಗಾಯ ? ಎಷ್ಟು ಹೊಲಿಗೆಗಳು ಬಿದ್ದಿದ್ದಾವೆ? ನನ್ನ ಮನಸ್ಸಿಗೆ ಆಘಾತವಾಗಿದೆ. ಸಿ.ಟಿ. ರವಿ ಅವರಿಗೆ ಶಿಕ್ಷೆಯಾಗುವ ವರೆಗೂ ಲಕ್ಷ್ಮೀ ಹೆಬ್ಬಾಳ್ಕರ ಸುಮ್ಮನೆ ಕೂರಲ್ಲ ಎಂದರು.

Tags:

error: Content is protected !!