State

ಜೀತ ಪದ್ಧತಿ ವಿಮುಕ್ತಿ ದಿನ: ಪ್ರತಿಜ್ಞಾ ವಿಧಿ ಬೋಧಿಸಿದ ಸಚಿವ ಈಶ್ವರಪ್ಪ

Share

ಇಂದು ಜೀತ ಪದ್ಧತಿ ವಿಮುಕ್ತಿ ದಿನ ಹಿನ್ನೆಲೆ ಬೆಂಗಳೂರಿನ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.
ವಾ.ಓ: ಕರ್ನಾಟಕ ರಾಜ್ಯದಲಿ ಪ್ರತಿ ವರ್ಷ ಫೆಬ್ರವರಿ 9ನೇ ತಾರೀಖನ್ನು ಜೀತ ಪದ್ದತಿ(ರದ್ದತಿ) ದಿನಾಚರಣೆ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಹೀಗಾಗಿ ಈ ದಿನ ಸರ್ಕಾರಿ ಕಚೇರಿಗಳಲ್ಲಿ ಜೀತ ಪದ್ಧತಿ ರದ್ದತಿಯ ಕುರಿತಂತೆ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಸಲು ಹಾಗೂ ಜೀತವಿಮುಕ್ತರಿಗೆ ಇರುವ ಹಕ್ಕುಗಳು ಮತ್ತು ಪುನರ್ವಸತಿ ಬಗ್ಗೆ ತಿಳುವಳಿಕೆ ನೀಡುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಲಾಗಿರುತ್ತದೆ.

ಅದೇ ರೀತಿ ವಿಧಾನಸೌಧದ 3ನೇ ಮಹಡಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಭೋದಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಕರ್ನಾಟಕವನ್ನು ಜೀತ ವಿಮುಕ್ತಿಗೊಳಿಸಲು, ಸಂಕಷ್ಟದಲ್ಲಿರುವ ಸಮುದಾಯಗಳ ಜನರಿಗೆ ನ್ಯಾಯವನ್ನು ಒದಗಿಸಲು ನನ್ನ ಸೇವೆಯನ್ನು ಮುಡುಪಾಗಿಡುತ್ತೇನೆ. ಈ ಮೂಲಕ ಸಮಾನತೆಯನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ ಎಂದರು.
ಈ ವೇಳೆ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು.

Tags:

error: Content is protected !!