ಕಂದಾಯಇಲಾಖೆಯ ಸಿಬ್ಬಂದಿಗಳು ಈ ಬಾರಿಯಗುರಿಯನ್ನು ಮುಟ್ಟಲುಕಾರ್ಯರತರಾಗಿರಬೇಕು.ಆರೋಗ್ಯಇಲಾಖೆಯಿಂದ ವ್ಯಾಪಾರಕ್ಕೆಅನುಮತಿ ಮತ್ತು ನೂತನಿಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುವಅಭಿಯಾನ ನಡೆಸುವಂತೆ ಮಹಾಪಾಲಿಕೆ ಆಯುಕ್ತ ರುದ್ರೇಶ ಘಾಳಿ ಸೂಚನೆ ನೀಡಿದರು.

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತಡಾ.ರುದ್ರೇಶ ಘಾಳಿ ಅವರುಕಂದಾಯ ಮತ್ತುಆರೋಗ್ಯಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಿದರು. ಪ್ರಸ್ತುತಆರ್ಥಿಕ ವರ್ಷ ಮುಂದಿನ ತಿಂಗಳು ಮುಕ್ತಾಯಗೊಳ್ಳಲಿದೆ.ಈ ಬಾರಿಯಾದರು ಕಳೆದ ಬಾರಿಯ 50 ಕೋಟಿಯಗುರಿ ಮುಟ್ಟುವ ಸಂಕಲ್ಪವನ್ನ ಪೂರ್ಣಗೊಳಿಸಬೇಕು.ಬಾಕಿ ಕರವನ್ನುಯಾವುದೇ ಲೋಪವಿಲ್ಲದೇ ವಸೂಲಾತಿ ಮಾಡಬೇಕುಎಂದರು. 
ಇನ್ನುಆರೋಗ್ಯ ಇಲಾಖೆ ವ್ಯಾಪಾರಕ್ಕೆಅನುಮತಿ ನೀಡುವ ವೇಳೆ ಪರಿಶೀಲನೆ ನಡೆಸಬೇಕು.ಇಲ್ಲಿಯ ವರೆಗೂ 6000 ಕ್ಕೂ ಹೆಚ್ಚು ಜನತಮ್ಮ ಪರವಾನಗಿಯನ್ನ ನೂತನಿಕರಣಗೊಳಿಸಿಕೊಂಡಿರುವುದಿಲ್ಲ. ಅವರ ವಿರುದ್ಧಕಠಿಣಕಾರ್ಯಾಚರಣೆ ನಡೆಸಬೇಕೆಂದುಎಚ್ಚರಿಕೆ ನೀಡಿದರು. 
ಈ ವೇಳೆ ಆರೋಗ್ಯಾಧಿಕಾರಿಡಾ.ಸಂಜಯ ಡುಮ್ಮಗೋಳ, ಕಂದಾಯಇಲಾಖೆಯ ಪ್ರಭಾರಿಉಪಾಯುಕ್ತ ಮಹಾದೇವ ಬನಸಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
