ಇಂದು ವ್ಯಾಲೆಂಟೈನ್ಸ್ ವಾರದ ಮೊದಲ ದಿನ. ಪ್ರೇಮಿಗೊಂದು ಕೆಂಗುಲಾಬಿ ನೀಡಿ ಮನದ ತುಡಿತಗಳನ್ನು ಹಂಚಿಕೊಳ್ಳುವ ವಿಶೇಷ ದಿನ. ಪ್ರೀತಿ ಆರಂಭಕ್ಕೆ, ಆರಂಭವಾದ ಪ್ರೀತಿಗೊಂದು ಹೊಸ ಖುಷಿ ನೀಡುವ ದಿನ ಅದುವೇ ರೋಸ್ ಡೇ.ನೀವು ಯಾರನ್ನಾದರೂ ತುಂಬಾ ಪ್ರೀತಿಸುತ್ತಿದ್ದರೆ ಅಂತಹವರಿಗೆ ಕೆಂಪು ಗುಲಾಬಿ ನೀಡಿ. ಕೆಂಗುಲಾಬಿ ಪ್ರೀತಿಯ ಸಂಕೇತ.

ಪ್ರೀತಿ ಎಂದರೆ ಅದು ಕೇವಲ ಪದಗಳಿಗೆ ಸೀಮಿತವಲ್ಲ , ಎರಡು ಮನಸ್ಸು, ವಿಶ್ವಾಸ ಮತ್ತು ಭಾವನೆಗಳ ಸಮ್ಮಿಲನ. ದೀರ್ಘಾಕಾಲದ ತಪಸ್ಸು, ಬಾಂಧವ್ಯಗಳನ್ನು ಗಟ್ಟಿಗೊಳಿಸುವ ಅದ್ಭುತ ಶಕ್ತಿ ಇಕ್ಕಿದೆ.
ಈ ಸುಂದರ ಅನುಭೂತಿ ನೀಡುವ ಪ್ರೀತಿಗೆ ಒಂದು ದಿನ ಮೀಸಲಿಡಲೇಬೇಕು ಅಲ್ವಾ. ಹೌದು ಪ್ರೀತಿಯ ಹಬ್ಬವನ್ನ ಒಂದು ವಾರದ ವರೆಗೆ ಆಚರಿಸಲಾಗುತ್ತೆ. ಅದುವೇ ವ್ಯಾಲೆಂಟೈನ್ಸ್ ವೀಕ್ .
ಅದರಲ್ಲಿ ಮೊದಲ ದಿನವೇ ರೋಸ್ ಡೇ. ಪ್ರೀತಿ ಗುಲಾಬಿಯಂತೆ. ಗುಲಾಬಿಯ ಮೃದುತ್ವ, ಸೌಂದರ್ಯದಂತೆ ಪ್ರೀತಿಯೂ ಕೂಡ ಗುಲಾಬಿಯ ಪಕಳೆಯಂತೆ ಹಂತಹಂತವಾಗಿ ಅರಳಿ ಸುಂದರ ಅನುಭವವನ್ನು ನೀಡುತ್ತದೆ.