ಬೆಳಗಾವಿ ನಗರದಲ್ಲಿ ತಲೆಎತ್ತಿರುವ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯನ್ನು ಬಂದ್ ಮಾಡಿ ಸರಕಾರ ಎಪಿಎಂಸಿಯನ್ನು ಉಳಿಸಬೇಕೆಂದು ರೈತರು ಹಾಗೂ ವ್ಯಾಪಾರಸ್ಥರು ನಡೆಸುತ್ತಿರುವ ಧರಣಿಯ 7ನೇ ದಿನವಾದ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು.

ನಗರದಲ್ಲಿ ತಲೆಎತ್ತಿರುವ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯನ್ನು ಬಂದ್ ಮಾಡಿ ಸರಕಾರ ಎಪಿಎಂಸಿಯನ್ನು ಉಳಿಸಬೇಕೆಂದು ರೈತರು ಹಾಗೂ ವ್ಯಾಪಾರಸ್ಥರು ಬೆಳಗಾವಿ ಎಪಿಎಂಸಿ ಆವರಣದಲ್ಲಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಭೇಟಿ ನೀಡಿದರು. ಇನ್ನು ಖಾಸಗಿ ಮಾರುಕಟ್ಟೆಯ ವಿಚಾರವಾಗಿ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ಮಾಧ್ಯಮಗಳೊಂದಗೆ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿ, ಕೇಂದ್ರದ ಎಪಿಎಂಸಿ ಕಾಯ್ದೆ ತಿದ್ದುಪಡಿಯ ಎಫೆಕ್ಟ್ ಬೆಳಗಾವಿಗೆ ತಟ್ಟಿದೆ. ಖಾಸಗಿ ತರಕಾರಿ ಮಾರುಕಟ್ಟೆಯವರಿಂದ ಸರಕಾರಿ ಎಪಿಎಂಸಿಗೆ ನಷ್ಟವಾಗಿದೆ. ಸರ್ಕಾರದ ಮೇಲೆ ನಿಮ್ಮನ್ನು ಉಳಿಸುವ ಜವಾಬ್ದಾರಿ ಇದೆ. ಎಪಿಎಂಸಿ ಸಂಪೂರ್ಣ ಮುಚ್ಚುವ ಮನಸ್ಥಿತಿಯಲ್ಲಿ ಖಾಸಗಿ ತರಕಾರಿ ಮಾರುಕಟ್ಟೆಯವರು ಇದ್ದಾರೆ. ಬೆಳಗಾವಿ ಶಾಸಕರ ಮೀರಿ ಡಿಸಿ ಕೆಲಸ ಮಾಡೋದು ಕಷ್ಟ. ನಿಮ್ಮನ್ನು ಕೇಳೊದಿಕಿಂತ ಮೊದಲು ನಾನೇ ಘೋಷಣೆ ಮಾಡಿದ್ದೇನೆ. ನಾವು ಖಾಸಗಿ ಮಾರುಕಟ್ಟೆ ಪಕ್ಕದಲ್ಲಿ ಮತ್ತೊಂದು ಮಾರುಕಟ್ಟೆ ನಿರ್ಮಾಣ ಮಾಡ್ತಿವಿ. ಅವರು ಬಾಯಿ ಮಾಡಿದ್ರೆ, ನಾವು ಅವರಿಂತ ಹೆಚ್ಚು ನಾವು ಬಾಯಿ ಮಾಡೋಣ. ಖಾಸಗಿ ತರಕಾರಿ ಮಾರುಕಟ್ಟೆ ಮಾಡಲು ನಾವು ಸಿದ್ದವಿದ್ದೇವೆ. ಧರಣಿ ಮಾಡುತ್ತೇವೆ, ವಿಷ ತಗೊತ್ತಿವಿ ಅಂದ್ರೆ ಅವರ್ಯಾರೂ ಕೇಳುವ ಸ್ಥಿತಿಯಲ್ಲಿಲ್ಲ ಎಂದರು.