Banglore

3ನೇ ಅಲೆ ನಿಶ್ಚಿತ: ಬೆಂಗಳೂರು ಲಾಕ್ ಬಗ್ಗೆ ಆರ್.ಅಶೋಕ ಸುಳಿವು..!

Share

3ನೇ ಅಲೆ ಬರೋದು ನಿಶ್ಚಿತ ಎನ್ನುವ ವಾತಾವರಣ ಇದೆ. ಬೆಂಗಳೂರು ರೆಡ್ ಝೋನ್ ಅಂತ ಕೇಂದ್ರ ಗುರುತಿಸಿದೆ. ರಾಜ್ಯದಲ್ಲಿ ಆರೂವರೆ ಕೋಟಿ ಜನರ ಜೀವ ಕಾಪಾಡೋದು ಮುಖ್ಯವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಮಹತ್ವದ ಮಾಹಿತಿ ನೀಡಿದ್ದಾರೆ.

ಸಿಎಂ ಬೊಮ್ಮಾಯಿ ಅವರ ಜೊತೆಗಿನ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಆರ್.ಅಶೋಕ್ ರಾಜ್ಯದಲ್ಲಿ ಕೋವಿಡ್, ಓಮಿಕ್ರಾನ್ ಕೇಸ್ ಹೆಚ್ಚಳ ಹಿನ್ನೆಲೆಯಲ್ಲಿ ಕೋವಿಡ್ 3ನೇ ಅಲೆ ಬಗ್ಗೆ ಪ್ರತ್ಯೇಕ ಸಭೆ ಮಾಡೋದಾಗಿ ಸಿಎಂ ಹೇಳಿದ್ದಾರೆ. ಮೂರನೇ ಅಲೆ ಬರೋದು ನಿಶ್ಚಿತ ಅನ್ನುವ ವಾತಾವರಣ ಇದೆ. ಬೆಂಗಳೂರು ರೆಡ್ ಝೋನ್ ಅಂತ ಕೇಂದ್ರ ಗುರುತಿಸಿದೆ. ಜನವರಿ 7ಕ್ಕೂ ಮುನ್ನ ಒಂದು ಸಭೆ ಮಾಡುತ್ತೇವೆ. ಆ ಸಭೆಯಲ್ಲಿ ಹೊಸ ಟಫ್ ರೂಲ್ಸ್ ತರುತ್ತೇವೆ. ತಜ್ಞರು ಮಾಡುವ ಶಿಫಾರಸುಗಳನ್ನು ಯಥಾವತ್ ಜಾರಿ ಮಾಡಲಾಗುತ್ತದೆ. ಪಶ್ಚಿಮ ಬಂಗಾಳ, ಮುಂಬೈ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಲಾಕ್‍ಡೌನ್ ಮಾಡಬೇಕಾಗುತ್ತದೆ ಎಂದು ಕೊರೊನಾ ಮಾರ್ಗಸೂಚಿ ತರುವ ಕುರಿತಾಗಿ ಸೂಚನೆ ಕೊಟ್ಟಿದ್ದಾರೆ ಎಂದರು.

ಇನ್ನು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಸರ್ಕಾರ ಕಡಿವಾಣ ಹಾಕುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಯಿಸಿದ ಆರ್.ಅಶೋಕ್ ಕಾಂಗ್ರೆಸ್, ಜೆಡಿಎಸ್‍ನವರು ಏನು ಮಾಡುತ್ತಾರೆ. ಅನ್ನೋದು ನಮಗೆ ಮುಖ್ಯವಲ್ಲ. ರಾಜ್ಯದ ಆರೂವರೆ ಕೋಟಿ ಜನರ ಜೀವ ಕಾಪಾಡೋದು ಮುಖ್ಯವಾಗಿದೆ. ಯಾವುದೇ ರ್ಯಾಲಿ, ಸಭೆ ವಿಚಾರ ನಮ್ಮ ತಲೆಯಲ್ಲಿ ಇಲ್ಲ. ಹೀಗಾಗಿ ಜನವರಿ 4 ಅಥವಾ 5ರಂದು ಸಭೆ ಮಾಡಿ ಬಿಗಿ ಕ್ರಮ ಜಾರಿ ಮಾಡುತ್ತೇವೆ. ಕೊವೀಡ್ ತಡೆಗೆ ಬಿಗಿ ಟಫ್ ರೂಲ್ಸ್ ಜಾರಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆ ಮಾಡುವ ಸುಳಿವನ್ನು ಸಚಿವ ಆರ್.ಅಶೋಕ್ ಬಿಟ್ಟುಕೊಟ್ಟಿದ್ದಾರೆ.

Tags:

error: Content is protected !!