Belagavi

ಆಟದ ಮೈದಾನದಲ್ಲಿ ಭರಮನಿ-ಚಂದ್ರಪ್ಪ ಆಮನೆ-ಸಾಮನೆ: ಹಗ್ಗ ಜಗ್ಗಾಟದಲ್ಲಿ ಯಾರು ಗೆದ್ರು..?

Share

ಕಳೆದ ಎರಡು ದಿನಗಳಿಂದ ನಡೆದ ಬೆಳಗಾವಿ ನಗರ ಪೊಲೀಸರ ಕ್ರೀಡಾಕೂಟಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಸದಾಕಾಲ ಒತ್ತಡದಲ್ಲಿಯೇ ಕೆಲಸ ಮಾಡುತ್ತಿದ್ದ ಪೊಲೀಸರು ವಿವಿಧ ಆಟಗಳಲ್ಲಿ ಭಾಗಿಯಾಗಿ ಸಖತ್ ಎಂಜಾಯ್ ಮಾಡಿದರು.

ಹೌದು ಪೊಲೀಸರು ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ತಮ್ಮ ಎಲ್ಲ ಅಭಿರುಚಿ, ಆಸಕ್ತಿಗಳು, ವಯಕ್ತಿಕ ಸುಖ-ಸಂತೋಷಗಳನ್ನು ಪಕ್ಕಕ್ಕಿಟ್ಟು ಕೆಲಸ ಮಾಡುತ್ತಾರೆ. ಇದರಿಂದ ಪೊಲೀಸರು ಸದಾಕಾಲ ಒತ್ತಡದಲ್ಲಿಯೇ ಕಾಲ ಕಳೆಯುತ್ತಿರುತ್ತಾರೆ. ಇಂತಹ ಪೊಲೀಸರು ಸ್ವಲ್ಪ ರಿಲ್ಯಾಕ್ಸ ಆಗಲಿ ಎಂದು ಪ್ರತಿ ವರ್ಷ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತದೆ. ಹೀಗಾಗಿ ಕಳೆದ ಬುಧವಾರದಿಂದ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಗರ ಪೊಲೀಸ್ ಇಲಾಖೆಯ ಕ್ರೀಡಾಕೂಟದಲ್ಲಿ ರಿಲೇ, ವ್ಹಾಲಿಬಾಲ್, ಕ್ರಿಕೆಟ್, ಖೋಖೋ, ಉದ್ದ ಜಿಗಿತ ಸೇರಿದಂತೆ ವಿವಿಧ ಆಟಗಳಲ್ಲಿ ಪಾಲ್ಗೊಂಡು ಅತ್ಯುತ್ತಮ ಪ್ರದರ್ಶನ ನೀಡಿದರು. ಇನ್ನು ಶುಕ್ರವಾರ ಸಾಯಂಕಾಲ ಎಸಿಪಿ ಚಂದ್ರಪ್ಪ ನೇತೃತ್ವದ ಖಡೇಬಜಾರ್ ಪೊಲೀಸ್ ತಂಡ ಮತ್ತು ಎಸಿಪಿ ನಾರಾಯಣ ಭರಮನಿ ನೇತೃತ್ವದ ವಿಶೇಷ ಪೊಲೀಸ್ ತಂಡದ ಮಧ್ಯ ನಡೆದ ಹಗ್ಗ-ಜಗ್ಗಾಟ ಅತ್ಯಂತ ತುರುಸಿನಿಂದ ನಡೆಯಿತು. ಈ ವೇಳೆ ಎರಡು ತಂಡಗಳ ಸದಸ್ಯರು ತಮ್ಮ ಕಸರತ್ತು ಪ್ರದರ್ಶಿಸಿದರು. ಅಂತಿಮವಾಗಿ ಎಸಿಪಿ ನಾರಾಯಣ ಭರಮನಿ ನೇತೃತ್ವದ ತಂಡವು ಗೆದ್ದು ಬೀಗಿತು.

Tags:

error: Content is protected !!