ಬೆಳಗಾವಿ ತಾಲೂಕಿನ ಅಲತಗಾ ಗ್ರಾಮದ ಯುವತಿಯೊರ್ವಳು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಅಲತಗಾ ಗ್ರಾಮದ ಜ್ಯೋತಿ ಸುರೇಶ ಗುಗ್ರೇಟಕರ(26) ಕಾಣೆಯಾಗಿರುವ ಯುವತಿ. ಜನವರಿ 11ರಂದು ರಾತ್ರಿ 1.20ರ ಸುಮಾರಿಗೆ ಮನೆಯಿಂದ ಹೋದವಳು ಮರಳಿ ಬಂದಿಲ್ಲ. ಈ ಸಂಬಂಧ ಯುವತಿ ಪೋಷಕರು ಕಾಕತಿ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಣೆಯಾಗಿರುವ ಜ್ಯೋತಿ ಸದೃಡ ಮೈ ಕಟ್ಟು, ಉದ್ದ ಮುಖ, ಉದ್ದ ಮೂಗು, ಮೈ ಬಣ್ಣ ಕಪ್ಪು ಕೆಂಪು ಬಣ್ಣದ ಚೂಡಿದಾರ ಧರಿಸಿದ್ದು, ಹಿಂದಿ ಹಾಗೂ ಮರಾಠಿ ಭಾಷೆ ಮಾತನಾಡುತ್ತಾಳೆ. ಸುಳಿವು ಸಿಕ್ಕಲ್ಲಿ ಬೆಳಗಾವಿ ಜಿಲ್ಲೆಯ ಕಾಕತಿ ಪೆÇಲೀಸ್ ಠಾಣೆಗೆ ಸಂಪರ್ಕಿಸಬಹುದು ಎಂದು ಕಾಕತಿ ಪೆÇಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.