DEATH

ಅನಾಥ ಮಕ್ಕಳ ಪಾಲಿನ ಮಹಾತಾಯಿ ಸಿಂಧುತಾಯಿ ಇನ್ನು ನೆನಪು ಮಾತ್ರ

Share

ಮಹಾರಾಷ್ಟ್ರದ ಸಾವಿರಾರು ಅನಾಥ ಮಕ್ಕಳ ಪಾಲಿನ ಮಹಾತಾಯಿ ಪದ್ಮಶ್ರೀ ಪುರಸ್ಕøತೆ ಸಿಂಧುತಾಯಿ ಸಪ್ಕಾಲ್ ಇನ್ನು ನೆನಪು ಮಾತ್ರ. ನಿನ್ನೆ ರಾತ್ರಿ ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದ್ದಾರೆ.

ಹೌದು ಪುಣೆಯ ಗ್ಯಾಲಾಕ್ಸಿ ಆಸ್ಪತ್ರೆಯಲ್ಲಿ ವಯೋ ಸಹಜ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಸಿಂಧುತಾಯಿ ಸಪ್ಕಾಲ್ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಅನಾಥ ಮಕ್ಕಳಿಗಾಗಿ ಸಿಂಧುತಾಯಿ ಸಪ್ಕಾಲ್ ಒಂದು ಸ್ವಂತ ಸಂಸ್ಥೆಯನ್ನೇ ಪ್ರಾರಂಭಿಸುತ್ತಾರೆ. ತಂದೆ ತಾಯಿ ಇಲ್ಲದ ಮಕ್ಕಳಿಗೆ ತಾಯಿಯ ಬೆಚ್ಚಗಿನ ನೆರಳಾಗಿ, ಅಪ್ಪನ ಆಸರೆಯಾಗುತ್ತಾ ಈವರೆಗೆ ಸುಮಾರು 1050 ಅನಾಥ ಮಕ್ಕಳಿಗೆ ಹೆತ್ತವ್ವಳಾಗಿದ್ದಾಳೆ ಮಹಾತಾಯಿ ಸಿಂಧುತಾಯಿ ಸಪ್ಕಾಲ್. ಇವಳ ಈ ಅದ್ಬುತ ಸಾಧನೆಗೆ ಇಡೀ ಜಗತ್ತೇ ತಲೆಬಾಗಿದೆ. ಅಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಸಿಂಧುತಾಯಿ ಇಂದು ಇಡೀ ಸಮಾಜವೇ ಅವಳತ್ತ ತಿರುಗಿ ನೋಡುವಂತ ಸಾಧನೆ ಮಾಡಿದ್ದಾಳೆ. ಇವತ್ತು ಸಿಂಧುತಾಯಿ ಅವರದು ಅತ್ಯಂತ ದೊಡ್ಡ ಕುಟುಂಬ ಅವರು ಕೈ ಹಿಡಿದು ಬೆಳೆಸಿದ ಅನಾಥ ಮಕ್ಕಳು ಇಂದು ದೇಶದ ನಾನಾ ಭಾಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಬ್ಬ ದನ ಕಾಯುವನ ಮಗಳು ಇಂದು ಅನಾಥ ಮಕ್ಕಳ ಪಾಲಿಗೆ ಮಹಾತಾಯಿ. ಸಿಂಧುತಾಯಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌವಿಸಲಾಗಿದೆ. ಇವರಿಗೆ ಪದ್ಮಶ್ರೀ ಸೇರಿದಂತೆ ಒಟ್ಟು 700ಕ್ಕೂ ಅಧಿಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಇವರು ಸಾಕಿದ ಮಗ ಸಿಂಧುತಾಯಿ ಕುರಿತು ಪಿಹೆಚ್‍ಡಿ ಮಾಡಿದ್ದಾನೆ. ಸಿಂಧುತಾಯಿ ಕುರಿತು ಚಲನಚಿತ್ರ ಕೂಡಾ ನಿರ್ಮಾಣ ಮಾಡಲಾಗಿದೆ. ಇವರ ಸಹಾಯದಲ್ಲಿ ಬೆಳೆದ ಅದೆμÉ್ಟೂೀ ಅನಾಥ ಮಕ್ಕಳು ಸಧ್ಯ ಅನಾಥಾ ಆಶ್ರಮಗಳನ್ನು ತೆರೆದು ನೊಂದವರ ಸೇವೆ ಮಾಡುತ್ತಿದ್ದಾರೆ. ಈಗಲೂ ಮಹಾರಾಷ್ಟ್ರದಲ್ಲಿ ಸಿಂಧುತಾಯಿ ಸಪ್ಕಾಲ್ ಎಂದೇ ಪ್ರಸಿದ್ದಳು. ತಮ್ಮ ಹುಟ್ಟನ್ನು ಸಾರ್ಥಕ ಪಡಿಸಿಕೊಂಡು, ಸಾವಿರಾರು ಮಕ್ಕಳಿಗೆ ಬದುಕು ಕೊಟ್ಟ ಸಿಂಧುತಾಯಿ ನಿನ್ನೆ ನಮ್ಮೆಲ್ಲರನ್ನು ಅಗಲಿದ್ದು. ಇವರ ಅಗಲಿಕೆಯಿಂದ ಮಹಾರಾಷ್ಟ್ರ ಅಷ್ಟೇ ಅಲ್ಲದೇ ಇಡೀ ದೇಶಾಧ್ಯಂತ ಶೋಕದ ವಾತಾವರಣ ನಿರ್ಮಾಣವಾಗಿದೆ.

Tags:

error: Content is protected !!