ಸತತ ಪರಿಶ್ರಮ ಪಟ್ಟರೆ ಏನು ಬೇಕಾದ್ರು ಸಾಧಿಸಬಹುದು ಎಂಬುದಕ್ಕೆ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಸರಕಾರಿ ಪ್ರೌಢಶಾಲೆಯ ದಹಿಕ ಶಿಕ್ಷಕರಾದ ಬಾಳಪ್ಪಾ ಲಕ್ಕಪ್ಪಾ ಕುಂಬಾರ ಇವರು ಸತತ 6 ತಿಂಗಳ ಪ್ರಯತ್ನಿಸಿ ಒಂದು ಆರ್ಟ್ ಪೇಪರ ಮೇಲೆ 501 ವರ್ಷಗಳ ಸುಧೀರ್ಘ ಮಾಹಿತಿ ನೀಡುವ ಕ್ಯಾಲೆಂಡರ್ ನಿರ್ಮಿಸಿ ದಾಖಲೆ ನಿರ್ಮಿಸಿದ್ದಾರೆ.
ಮಂಗಸೂಳಿ ಸರಕಾರಿ ಶಾಲೆಯ ದೈಹಿಕ ಶಿಕ್ಷಕ ಬಾಳಪ್ಪಾ ಕುಂಬಾರ ಇವರು 24 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಈ ಮೊದಲು ಚಿಕ್ಕೋಡಿ ಮರಾಠಿ ಹೆಣ್ಣು ಮಕ್ಕಳ ಶಾಲೆಯಲ್ಲಿ ದಹಿಕ ಶಿಕ್ಷಕರಾಗಿ 11 ವರ್ಷ ಸೇವೆ ಸಲ್ಲಿಸಿ, ಈಗ ಮಂಗಸೂಳಿಯಲ್ಲಿ 3 ವರ್ಷಗಳಿಂದ ದಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೇವಲ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಅμÉ್ಟೀ ಕರ್ತವ್ಯ ಅಲ್ಲ ಎಂದು, ಬೇರೆ-ಬೇರೆ ವಿಷಯಗಳಲ್ಲಿಯೂ ಪ್ರಯೋಗ ಮಾಡಿದ್ದಾರೆ. ಬೇರೆಯವರು ಒಂದು ವರ್ಷದ ಕ್ಯಾಲೆಂಡರ್ ತಯಾರಿಸುವ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದು ನಾನು ಈ ರೀತಿ ಮಾಡಬಹುದಾ..? ಎಂಬ ಚಿಂತನೆ ಮಾಡಿ. ಪ್ರಾರಂಭದಲ್ಲಿ 3 ವರ್ಷದ ಕ್ಯಾಲೆಂಡರ್ ನಿರ್ಮಿಸಿದರು. ನಂತರ 300 ವರ್ಷದ ಕ್ಯಾಲೆಂಡರ್ ನಿರ್ಮಿಸಿ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಇವರ ಗಮನಕ್ಕೆ ತಂದಾಗ ಅವರು ಸಂಪೂರ್ಣ ಮಾಹಿತಿ ಪಡೆದು ಒಳ್ಳೆ ಪ್ರಯತ್ನವೆಂದು ಆಶೀರ್ವಾದ ಪಡೆದುಕೊಂಡಿದ್ದರು. ಚಿಂಚಣಿ ಮಠದ ಅಲ್ಲಮಪ್ರಭು ಸ್ವಾಮೀಜಿ ಶಿಕ್ಷಕ ದಿನಾಚರಣೆದಂದು ಕ್ಯಾಲೆಂಡರ್ ಬಗ್ಗೆ ಮಾಹಿತಿ ಪಡೆದು ಸಂತಸ ವ್ಯಕ್ತಪಡಿಸಿದ್ದರು. ಬಳಿಕ ಕಳೆದ 6 ತಿಂಗಳಗಳಲ್ಲಿ ನಿರಂತರವಾಗಿ ಪ್ರಯತ್ನಿಸಿ ಸನ್ 1800 ರಿಂದ 2300 ವರೆಗಿನ 501 ವರ್ಷದ ಕ್ಯಾಲೆಂಡರ್ ನಿರ್ಮಿಸಿದ್ದು, ಇದನ್ನು ಕಂಡು ಜನೇವರಿ 31 ರಂದು ಕಾಗವಾಡದಲ್ಲಿ ಜರುಗಿದ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಸಾಹಿತಿ ಡಾ. ಲೋಕಾಪುರೆ ಇವರು ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.
ಈ ಬಗ್ಗೆ ಇನ್‍ನ್ಯೂಸ್ ಜೊತೆ ಮಾತನಾಡಿರುವ ಸಾಧಕ ಬಾಳಪ್ಪಾ ಕುಂಬಾರ ಅವರು ನನ್ನ ಬಳಿಯಿರುವ ಈ ಜ್ಞಾನ ವಿದ್ಯಾರ್ಥಿಗಳಿಗೆ ನೀಡಿ ಗಣಿತ ವಿಷಯದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಲಿ ಎಂಬ ಗುರಿ ನನ್ನದಾಗಿದೆ ಎಂದು ಹೇಳಿದರು.
ಒಟ್ಟಾರೆ ಯಾರೂ ಮಾಡದ ಸಾಧನೆ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿರುವ ಶಿಕ್ಷಕ ಬಾಳಪ್ಪಾ ಕುಂಬಾರ ಅವರ ಕಾರ್ಯ ನಿಜಕ್ಕೂ ಎಲ್ಲರಿಗೂ ಮಾದರಿಯೇ ಸರಿ.