Belagavi

ಮಧ್ವ ನವಮಿ ನಿಮಿತ್ತ ಶಿಂಧೋಳ್ಳಿಯಲ್ಲಿ ಪ್ರವಚನ, ನಾಮ ಸಂಕೀರ್ತನ

Share

ಮಧ್ವ ನವಮಿ ಉತ್ಸವದ ಅಂಗವಾಗಿ ಬೆಳಗಾವಿಯ ವಿಶ್ವ ಮಧ್ವ ಮಹಾ ಪರಿಷತ್ ಶಾಖೆಯಿಂದ ಶಿಂಧೋಳ್ಳಿ ಗ್ರಾಮದ ಸಂಜೀವಿನಿ ಗಜಾನನ ದೇವಸ್ಥಾನದಲ್ಲಿ ಪ್ರವಚನ, ನಾಮ ಸಂಕೀರ್ತನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಶಿಂಧೋಳಿ ಗ್ರಾಮದ ಸಂಜೀವಿನಿ ಗಜಾನನ ದೇವಸ್ಥಾನದಲ್ಲಿ ಪಂ.ಪ್ರಮೋದಾಚಾರ್ಯ ಕಟ್ಟಿ ಹಾಗು ಪಂ.ಶ್ರೀನಿಧಿ ಆಚಾರ್ಯ ಜಮನೀಸ ಅವರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ಮತ್ತು ಮಧ್ವಾಚಾರ್ಯರ ಭಾವ ಚಿತ್ರ ಹಾಗೂ ಸುಮಧ್ವ ವಿಜಯ ಗ್ರಂಥದೊಂದಿಗೆ ಸಂಕೀರ್ತನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇಂಡಾಲನಗರ, ಸಿಂಧೋಳಿ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಭೀಮಸೇನ ಮಿರ್ಜಿ, ಶ್ರೀಧರ ಹಲಗತ್ತಿ, ಶಿಂಧೋಳಿಯ ಶ್ರೀ ವಾಣಿ ಭಜನಾ ಮಂಡಳಿಯ ಸುಮಾ ನಾಡಗೌಡ, ಶ್ರೀದೇವಿ ಕುಲಕರ್ಣಿ, ಮಂಜು ದೇಶಪಾಂಡೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Tags:

error: Content is protected !!