ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ನಾವು ಮುಂಚೂಣಿಯಲ್ಲಿ ಇರಬೇಕು. ದೊಡ್ಡ ಜಿಲ್ಲೆ ಎಂದರೆ ದೊಡ್ಡ ದೊಡ್ಡ ಕೆಲಸಗಳು ಆಗಬೇಕು. ಹೀಗಾಗಿ ಇಡೀ ರಾಜ್ಯದಲ್ಲಿಯೇ ಕೆಲಸ ಮಾಡಲು ಬೆಳಗಾವಿ ಜಿಲ್ಲೆ ಪ್ರತಿ ತಿಂಗಳ ರೇಟಿಂಗ್‍ನಲ್ಲಿ ಬೆಸ್ಟ್ ಆಫ್ 5ನಲ್ಲಿ ಇರುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಹರ್ಷವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ ಸಂಘದ ಸಂಯುಕ್ತ ಆಶ್ರಯದಲ್ಲಿ ಪಶು ವೈದ್ಯರ ತಾಂತ್ರಿಕ ಸಮ್ಮೇಳನವನ್ನು ಬೆಳಗಾವಿಯ ಪಶುವೈದ್ಯರ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಡಿಸಿ ಮಹಾಂತೇಶ ಹಿರೇಮಠ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು ಎಲ್ಲಾ ಇಲಾಖೆಗಳ ಕೆಲಸಗಳಲ್ಲಿಯೂ ಕೂಡ ಬೆಳಗಾವಿ ಜಿಲ್ಲೆ ಮುಂಚೂಣಿಯಲ್ಲಿ ಇರುತ್ತದೆ. ಪ್ರತಿ ತಿಂಗಳು ಸರ್ಕಾರ ಬಿಡುಗಡೆ ಮಾಡುವ ರೇಟಿಂಗ್‍ನಲ್ಲಿ ನಮ್ಮ ಜಿಲ್ಲೆ ರಾಜ್ಯದ ಅತ್ಯುತ್ತಮ ಐದು ಜಿಲ್ಲೆಗಳಲ್ಲಿ ಒಂದಾಗಿರುತ್ತದೆ. ಇದಕ್ಕೆಲ್ಲಾ ಕೆಳಹಂತದಿಂದ ಹಿಡಿದು ಎಲ್ಲಾ ಸಿಬ್ಬಂದಿ, ಅಧಿಕಾರಿಗಳ ಶ್ರಮವೇ ಕಾರಣ ಎಂದು ತಿಳಿಸಿದರು. ಇನ್ನು ಜಾನುವಾರುಗಳ ಬಗ್ಗೆ ನನಗೆ ವಿಶೇಷ ಕಾಳಜಿಯಿದೆ.
ನಾನು ಕೂಡ ಕೃಷಿ ಕುಟುಂಬದಿಂದ ಬಂದಿದ್ದೇನೆ. ಬಾಲ್ಯದಲ್ಲಿ ನಾನು ಕೂಡ ಜಾನುವಾರುಗಳನ್ನು ಮೇಯಿಸಿದ್ದೇನೆ. ಹೀಗಾಗಿ ನನಗೆ ಮೂಕಪ್ರಾಣಿಗಳ ಸೇವೆ ಮಾಡುವ ಸೌಭಾಗ್ಯ ನಿಮಗೆ ಸಿಕ್ಕಿದೆ. ಈವರೆಗೆ ಒಳ್ಳೆಯ ರೀತಿ ಕೆಲಸ ಮಾಡುತ್ತಿದ್ದಿರಿ. ಹೀಗಾಗಿ ಔಷಧಿ, ಲಸಿಕೆ ನೀಡುವುದರಲ್ಲಿ ಹೆಚ್ಚಿನ ಸಂಶೋಧನೆ ಆಗಿರುತ್ತದೆ. ಅವುಗಳನ್ನು ಅಪ್‍ಡೇಟ್ ಮಾಡಿಕೊಳ್ಳಬೇಕು. ಆ ದೃಷ್ಟಿಯಿಂದ ಈ ತಾಂತ್ರಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಹೈದರಾಬಾದ್‍ನಿಂದ ತಜ್ಞರಾದ ಡಾ.ಗಿರೀಶ್ ಪಾಟೀಲ್ ಆಗಮಿಸಿದ್ದು, ಅವರಿಂದ ಒಳ್ಳೆಯ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕ ಡಾ.ಜೆ.ಪಂಪಾವತಿ, ಹೈದರಾಬಾದ್‍ನ ರಾಷ್ಟ್ರೀಯ ಮಾಂಸ ಸಂಶೋಧನಾ ಕೇಂದ್ರದ ಪ್ರಧಾನ ವಿಜ್ಞಾನಿ ಡಾ.ಗಿರೀಶ್ ಪಾಟೀಲ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರ ಡಾ.ಅಶೋಕ್ ಕೊಳ್ಳಾ, ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಹುಂಡೇಕರ್ ಎಮ್.ಎಸ್, ಪ್ರಧಾನಕಾರ್ಯದರ್ಶಿ ಡಾ.ಚಂದ್ರು ಧರಣೆಪ್ಪಗೌಡರ, ಖಜಾಂಚಿ ಡಾ.ಎ.ಗಂಗರೆಡ್ಡಿ, ಡಾ.ನಾಡಗೌಡ ಸೇರಿದಂತೆ ಹಲವು ಪಶುವೈದ್ಯರು ಉಪಸ್ಥಿತರಿದ್ದರು.