ವಿದೇಶಗಳಿಂದ ಭಾರೀ ಬೇಡಿಕೆ ಹಿನ್ನೆಲೆಯಲ್ಲಿ ಭಾರತದಲ್ಲಿ ತಯಾರಿಸಲಾಗಿರುವ ಕೋವಿಶೀಲ್ಡ್ ರಫ್ತಿಗೆ ಕೇಂದ್ರ ಸರ್ಕಾರ ನಿಬರ್ಂಧ ವಿಧಿಸುವ ದಿಟ್ಟ ನಿರ್ಧಾರ ಕೈಗೊಂಡಿದೆ.
: ಕೊರೊನಾ ವೈರಸ್ಗೆ ತುರ್ತು ಲಸಿಕೆಗೆ ಕೋವಿಶೀಲ್ಡ್ ಬಳಕೆಗೆ ಅವಕಾಶ ಸಿಕ್ಕಿದ್ದು, ವಿದೇಶಗಳಲ್ಲಿ ಕೋವಿಶೀಲ್ಡ್ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೋವಿಶೀಲ್ಡ್ ರಪ್ತಿಗೆ ನಿಬರ್ಂಧ ಹೇರಿದೆ.
ಪುಣೆಯಲ್ಲಿ ಉತ್ಪಾದನೆಯಾಗುತ್ತಿರುವ ಕೋವಿಶಿಲ್ಡ್ ಲಸಿಕೆ ರಫ್ತಿಗೆ ಕೇಂದ್ರ ಸರ್ಕಾರ ನಿಬರ್ಂಧ ಹೇರಿದ್ದು, ವಿದೇಶಗಳಲ್ಲಿ ಕೋವಿಶಿಲ್ಡ್ಗೆ 100 ಕೋಟಿ ಡೋಸ್ಗೆ ಬೇಡಿಕೆ ಇದೆ. ಭಾರತದಲ್ಲಿ ಮೊದಲ ಹಂತದ ತುರ್ತು ಬಳಕೆಗೆ ಅವಕಾಶ ನೀಡಲಾಗಿದೆ. ಇದಾದ ಬಳಿಕ ವಿದೇಶಗಳಿಗೆ ರಪ್ತು ಮಾಡಲು ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.