Bagalkot

ಯಡಿಯೂರಪ್ಪನವರ ನೋಡಲು ಆಗದಂಥ ಸಿಡಿಗಳೂ ಇವೆ: ಯತ್ನಾಳ್ ಸ್ಫೋಟಕ ಹೇಳಿಕೆ

Share

ಸಿಡಿ ಬಹಿರಂಗಪಡಿಸುವುದಾಗಿ ಹೆದರಿಸಿ ಮಂತ್ರಿ ಆದವರ ಬಗ್ಗೆ ನಾನು ಮಾತನಾಡಿದ್ದು ನಿಜ. ಸಿಡಿಯಲ್ಲಿ ಸಿಎಂ ಯಡಿಯೂರಪ್ಪ ಅವರ ಭ್ರಷ್ಟಾಚಾರ ಮಾತ್ರ ಇಲ್ಲ. ನೋಡಲು ಆಗದಂಥ ಸಿಡಿಗಳೂ ಇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ನನ್ನ ಬಳಿ 3 ಜನ ಬಂದಿದ್ರು. ಅವರ ಬಳಿ ಇರುವ ಸಿಡಿಗಳನ್ನು ತೋರಿಸಿದರು. ನಾನು ಸಿಡಿಗಳನ್ನೆಲ್ಲ ಇಟ್ಟುಕೊಂಡು ಆಟವಾಡುವ ವ್ಯಕ್ತಿ ಅಲ್ಲ. ಅಂತಹ ಆಟ ಆಡಿದ್ದರೆ ಡಿಸಿಎಂ ಆಗ್ತಿದ್ದೆ ಎಂದು ತಿಳಿಸಿದರು.

ಡಿಕೆಶಿ, ಜಾರ್ಜ್, ಜಮೀರ್ ಅಹ್ಮದ್ ಬಳಿ ಹಲವು ಮಹತ್ವದ ಸಿಡಿ ಇವೆ. ನೀವು ಯಡಿಯೂರಪ್ಪ, ವಿಜಯೇಂದ್ರ ಜೊತೆ ಅಡ್ಜಸ್ಟ್ ಮೆಂಟ್ ಮಾಡಿಕೊಂಡಿಲ್ಲ ಎನ್ನುವುದಾದರೆ ಆ ಸಿಡಿ ಬಹಿರಂಗಗೊಳಿಸಬೇಕು. ಕಾಂಗ್ರೆಸ್‍ನವರಿಗೆ ನೈತಿಕತೆ ಇದ್ದರೆ, ನಿಜವಾದ ವಿಪಕ್ಷ ಸ್ಥಾನದಲ್ಲಿ ಅವರು ಇದ್ದರೆ ಸಿಡಿಗಳನ್ನು ರಿಲೀಸ್ ಮಾಡಲಿ ಎಂದು ಬಸನಗೌಡ ಪಾಟೀಲ ಯತ್ನಾಳ್ ಸವಾಲು ಹಾಕಿದರು.

Tags:

error: Content is protected !!