ಬೆಳಗಾವಿ ತಾಲೂಕು ಮುತಗಾ ಗ್ರಾಮದಲ್ಲಿ ಮಟಕಾ ದಾಳಿ ನಡೆಸಿರುವ ಪೊಲೀಸರು 11 ಆರೋಪಿಗಳನ್ನು ಬಂಧಿಸಿ 42,800 ರೂ. ನಗದು, 5 ಮೊಬೈಲ್, 1 ಟ್ಯಾಬ್ ವಶಪಡಿಸಿಕೊಂಡಿದ್ದಾರೆ.ಖಚಿತ ಮಾಹಿತಿ ಮೇರೆಗೆ ಮುತಗಾ ಗ್ರಾಮದ ಮಟಕಾ ಅಡ್ಡೆಯ ಮೇಲೆ ದಾಳಿ ನಡೆಸಿದ ಮಾರಿಹಾಳ ಪೊಲೀಸರು, ಮಟಕಾ ಆಟದಲ್ಲಿ ತೊಡಗಿದ್ದ 11 ಜನರನ್ನು ವಶಕ್ಕೆ ಪಡೆದುಕೊಂಡರು. ಬಂಧಿತರನ್ನು ಮುತಗಾದ ಪ್ರತೀಕ ಇಂಗಳೆ, ಶಿಂಧೋಳ್ಳಿಯ ಯಲ್ಲಪ್ಪ ಕಮ್ಮಾರ, ನಿಲಜಿಯ ಸತೀಶರಾಜ್ ಪಾಟೀಲ. ವಿಕಾಸ ಮೋದಗೇಕರ, ಗಜಾನಂದ ಸುತಾರ್, ಸಾಂಬ್ರಾದ ಮಹಾದೇವ ನೀಲಗಾರ, ಮನೋಹರ ಬಾವುಕಣ್ಣ ಚೌಗಲೆ, ಶಿವಾಜಿ ಜ್ಯೋತಿಬಾ ಕುರಿಹಾಳ, ಪರಶುರಾಮ ಕೇದಾರಿ ಚಿಂಗಳೆ, ಪಾಂಡುರಂಗ ಬಿರ್ಜೆ ಎಂದು ಗುರುತಿಸಲಾಗಿದೆ.
ಮಾರಿಹಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.