Belagavi

ಬಡಾಲ ಅಂಕಲಗಿಯಲ್ಲಿ ಶ್ರೀ ಕೃಷ್ಣ ಭವನ ನಿರ್ಮಾಣಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶಂಕುಸ್ಥಾಪನೆ

Share

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಡಾಲ ಅಂಕಲಗಿ ಗ್ರಾಮದಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಕೃಷ್ಣ ಭವನಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸೋಮವಾರ ಸಂಜೆ ಅಡಿಗಲ್ಲನ್ನಿಟ್ಟು, ಪೂಜೆ ಸಲ್ಲಿಸಿದರು.

ಬಡಾಲ ಅಂಕಲಗಿಯ ಶ್ರೀ ರಾಚಯ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ತಾಲೂಕು ಪಂಚಾಯಿತಿ ಅಧ್ಯಕ್ಷ ಶಂಕರಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಸಿ.ಪಾಟೀಲ, ಅಡಿವೇಶ ಇಟಗಿ, ರಾಮನಗೌಡ ಪಾಟೀಲ, ಸಿದ್ದಪ್ಪ ಚಾಪಗಾವಿ, ವಿಠ್ಠಲ ಅರ್ಜುನವಾಡಿ, ಭೂದಾನಿಗಳಾದ ಶಿವಬಸಪ್ಪ ಜಗಮನಿ, ನಾಗರಾಜ ಜಗಮನಿ, ಹಿರಿಯರಾದ ಬಸವರಾಜ ಹಾಯಣ್ಣವರ್, ಅರವಿಂದ ವೈದ್ಯರು, ಸಂಗಪ್ಪ ಕುಡಚಿ, ವೈ.ಬಿ.ಪೂಜೇರ್, ವೈ.ಆರ್.ನಾಯಕ, ಎಂ.ಪಿ.ಹೊಟ್ಟಿನ್ನವರ್, ಮರ್ಸಿದ್ದಿ ಬಾಳೆಕುಂದರಗಿ ಮೊದಲಾದವರಿದ್ದರು.

Tags:

error: Content is protected !!