Belagavi

ಚೆಕ್ ಪೋಸ್ಟ್ ಬಳಿ ಭಗವಾ ಧ್ವಜ ಹಿಡಿದು ಗಡಿಗೆ ನುಗ್ಗಲು ಶಿವಸೇನೆ ಪುಂಡಾಟ: ಪೊಲೀಸರೊಂದಿಗೆ ನೂಕಾಟ, ತಳ್ಳಾಟ

Share

ಬೆಳಗಾವಿ ಪಾಲಿಕೆ ಪಾಲಿಕೆ ಮುಂದೆ ಭಗವಾ ಧ್ವಜ ಹಾರಿಸುವ ಉದ್ದೇಶದಿಂದ ಮಹಾರಾಷ್ಟ್ರ ಕೊಲ್ಲಾಪುರದಿಂದ ಬೆಳಗಾವಿಗೆ ಬರಲು ಯತ್ನಿಸಿದ ಶಿವಸೇನೆ ಪುಂಡರನ್ನು ಪೊಲೀಸರು ನಿಪ್ಪಾಣಿ ಬಳಿಯ ಕೊಗನೊಳ್ಳಿ ಚೆಕ್ ಪೆÇೀಸ್ಟ್ ತಡೆದರು. ಈ ವೇಳೆ ಶಿವಾಜಿ ಮಹಾರಾಜ ಹಾಗೂ ಭವಾನಿ ಹೆಸರಿನಲ್ಲಿ ಘೋಷಣೆ ಮೊಳಗಿಸಿದ ಶಿವಸೇನೆ ಪುಂಡರು, ಪೊಲೀಸರೊಂದಿಗೆ ನೂಕಾಟ, ತಳ್ಳಾಟ ನಡೆಸಿದರು.

ಬೆಳಗಾವಿಯಲ್ಲಿ ಎಂಇಎಸ್ ರ್ಯಾಲಿ ರದ್ದು ಪಡಿಸಿದ್ದರೂ ಮಹಾರಾಷ್ಟ್ರದ ಕೊಲ್ಲಾಪುರದಿಂದ ಶಿವಸೇನೆ ಪುಂಡರು ಬೆಳಗಾವಿಯತ್ತ ಬರಲು ಯತ್ನಿಸಿದರು. ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಭಗವಾ ಧ್ವಜ ಹಾರಿಸುವ ಉದ್ದೇಶದಿಂದ ಆಗಮಿಸುತ್ತಿರುವ ಪುಂಡರನ್ನು ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಈ ವೇಳೆ ಶಿವಾಜಿ ಮಹಾರಾಜ ಹಾಗೂ ಭವಾನಿ ಹೆಸರಿನಲ್ಲಿ ಘೋಷಣೆ ಮೊಳಗಿಸಿದ ಶಿವಸೇನೆ ಪುಂಡರು, ಪೊಲೀಸರೊಂದಿಗೆ ನೂಕಾಟ, ತಳ್ಳಾಟ ನಡೆಸಿದರು.

ಈ ವೇಳೆ ಕೊಲ್ಲಾಪುರ ಶಿವಸೇನೆ ಪ್ರಮುಖ ಸಂತೋಷ ಪವಾರ್ ಮಾತನಾಡಿ, ಬೆಳಗಾವಿ ಗಡಿ ಪ್ರದೇಶದಲ್ಲಿ ಭಗವಾ ಧ್ವಜ ನೆಡಲು ನಿರ್ಧರಿಸಿದ್ದೇವೆ. ಇದು ಅಚಲ. ಪಾಲಿಕೆ ಎದುರು ಭಗವಾ ಧ್ವಜ ಹಾರಿಸಲು ಅವಕಾಶ ನೀಡಲೇಬೇಕು ಎಂದು ಒತ್ತಾಯಿಸಿದರು.

ಶಿವಸೈನ್ಯದ ಮುಖಂಡರು ಮಾತನಾಡಿ, ಭಗವಾ ಧ್ವಜ ಹಾರಿಸಲು ಕೊಲ್ಲಾಪುರದಿಂದ ಬಂದಿರುವ ನಾವು ಧ್ವಜ ಹಾರಿಸಿಯೇ ವಾಪಸ್ ಹೋಗುತ್ತೇವೆ ಎಂದರು.

ಈ ವೇಳೆ ಡಿಸಿಪಿ ಡಾ.ವಿಕ್ರಮ ಆಮ್ಟೆ ಮಾತನಾಡಿ, ಶಾಂತಿಗೆ ಭಂಗ ತರುವುದಿಲ್ಲ. ಕಾನೂನು ಸುವ್ಯವಸ್ಥೆ ಭಂಗಗೊಳಿಸುವುದಿಲ್ಲ ಎಂದು ಎಂಇಎಸ್‍ನವರು ಮಾತು ಕೊಟ್ಟಿದ್ದರು. ಆದರೆ ಗಡಿಯಲ್ಲಿ ದಿಢೀರ್ ಎಂದು ಶಿವಸೇನೆಯೆಂದು ಹೇಳಿಕೊಂಡು ಜನರು ಬಂದಿದ್ದಾರೆ. ಅವರಿಗೆ ತಿಳಿವಳಿಕೆ ಹೇಳಿ ವಾಪಸ್ ಕಳಿಸಿದ್ದೇವೆ. ಮಹಾರಾಷ್ಟ್ರ ಪೊಲೀಸರ ಜೊತೆಗೂ ಸಂಪರ್ಕ ಸಾಧಿಸಿದ್ದೆವು.ಸಹಕರಿಸುವುದಾಗಿ ಅವರೂ ತಿಳಿಸಿದ್ದಾರೆ. ಗಲಾಟೆ ಆಗದಂತೆ ಇನ್ನಷ್ಟು ದಿನ ಬಿಗಿ ಬಂದೋಬಸ್ತ್ ಮುಂದುವರಿಯಲಿದೆ. ಗಲಾಟೆ ಮಾಡುವವರ ಮೇಲೆ ನಿಗಾ ಇರಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಖಚಿತ ಎಂದು ತಿಳಿಸಿದರು.

ಒಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಬಳಿ ಕನ್ನಡ ಧ್ವಜ ಹಾರಿಸಿದ ನಂತರ ಎಂಇಎಸ್ ಮುಖಂಡರು, ಕಾರ್ಯಕರ್ತರ ಚಟುವಟಿಕೆ ತಾರಕಕ್ಕೇರಿದೆ. ಕನ್ನಡ ಧ್ವಜಕ್ಕೆ ವಿರುದ್ಧಾರ್ಥಕವಾಗಿ ಭಗವಾ ಧ್ವಜ ಇದೆ ಎನ್ನುವಂತೆ ಎಂಇಎಸ್ ವರ್ತಿಸುತ್ತಿರುವುದು ತೀವ್ರ ಚರ್ಚೆಗೂ ಗ್ರಾಸವಾಗಿದೆ.

 

Tags:

error: Content is protected !!