ಬೆಳಗಾವಿ ಮಹಾನಗರ ಪಾಲಿಕೆಯಿಂದ ನಗರದ ಕಾಂದಾ ಮಾರ್ಕೆಟ್ನಲ್ಲಿನ ಅಂಗಡಿಗಳನ್ನು ಹರಾಜು ಹಾಕುವ ಪ್ರಕ್ರಿಯೆಗೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.
: ಹೌದು ಶುಕ್ರವಾರ ಬೆಳಗಾವಿಯ ಕಾಂದಾ ಮಾರ್ಕೆಟ್ನ ಮಳಿಗೆಗಳಿಗೆ ಮಹಾನಗರ ಪಾಲಿಕೆಯಲ್ಲಿ ಹರಾಜು ಪ್ರಕ್ರಿಯೆಗೆ ಆಹ್ವಾನಿಸಲಾಗಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ವ್ಯಾಪಾರಿಗಳು ಹರಾಜು ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದರು.
ಈ ಸಂಬಂಧ ನ್ಯಾಯವಾದಿ ಪ್ರವೀಣ ಮಾತನಾಡಿ ಜನವರಿ 4ವರೆಗೆ ಹರಾಜು ಪ್ರಕ್ರಿಯೆ ಮಾಡದಂತೆ ಹೈಕೋರ್ಟ್ ಆದೇಶ ನೀಡಿದೆ. ಅದೇ ರೀತಿ ಈ ಜಾಗ ಪಾಲಿಕೆಗೆ ಸೇರಿದ್ದಲ್ಲ. ಆದರೂ ಕೂಡ ಪಾಲಿಕೆಯವರು ಅಂಗಡಿಗಳನ್ನು ಹರಾಜು ಪ್ರಕ್ರಿಯೆ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.
ಒಟ್ಟಾರೆ ಕಾಂದಾ ಮಾರ್ಕೆಟ್ ಹರಾಜು ಪ್ರಕ್ರಿಯೆ ಸಧ್ಯ ವಿವಾದದ ಸ್ವರೂಪ ಪಡೆದುಕೊಂಡಿದ್ದು. ವ್ಯಾಪಾರಿಗಳು ವರ್ಸಸ್ ಪಾಲಿಕೆ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ. ನ್ಯಾಯಕ್ಕಾಗಿ ಆಗ್ರಹಿಸಿ ವ್ಯಾಪಾರಿಗಳು ಪೊಲೀಸ್ ಕಮೀಷನರ್ ಮೊರೆ ಹೋಗಿದ್ದು. ಪೊಲೀಸ್ ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂದು ಕಾಯ್ದು ನೋಡಬೇಕಿದೆ.