ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆ ಕುಂದಾನಗರಿ ಬೆಳಗಾವಿ ಕೇಸರಿಮಯವಾಗಿದೆ. ಎಲ್ಲೆಲ್ಲಿಯೂ ಬಿಜೆಪಿ ಬಾವುಟಗಳೇ ರಾರಾಜಿಸುತ್ತಿದ್ದು. ನಾಳೆ ಲಕ್ಷ ಲಕ್ಷ ಜನರು ಸೇರುವ ನಿರೀಕ್ಷೆಯಿದೆ.
ಹೌದು ಅಮಿತ್ ಶಾ ಭಾರತ ಸರ್ಕಾರದ ಗೃಹ ಇಲಾಖೆ ಸಚಿವ, ನಿಟಕಪೂರ್ವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಪ್ರಧಾನಿ ಮೋದಿ ಬಿಟ್ಟರೆ ಸಧ್ಯಕ್ಕೆ ಬಿಜೆಪಿಯಲ್ಲಿ ಪವರ್ಫುಲ್ ಲೀಡರ್ ಎಂದರೆ ಅದು ಅಮಿತ್ ಶಾ. ಇಂತಹ ನಾಯಕ ರವಿವಾರ ಬೆಳಗಾವಿಯಲ್ಲಿ ನಡೆಯಲಿರುವ ಜನಸೇವಕ ಸಮಾವೇಶದಲ್ಲಿ ಭಾಗಿಯಾಗಲು ಆಗಮಿಸುತ್ತಿರುವುದು ಕೇಸರಿ ಪಡೆಯಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಅಮಿತ್ ಶಾರನ್ನು ಕಣ್ತುಂಬಿಕೊಳ್ಳಲು, ಅಮಿತ್ ಶಾ ಭಾಷಣ ಕೇಳಲು ಬಿಜೆಪಿ ಕಾರ್ಯಕರ್ತರು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು ನಗರದ ನೆಹರು ಕ್ರೀಡಾಂಗಣವಂತೂ ಅಕ್ಷರಶಃ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಅದೇ ರೀತಿ ನಗರದ ಪ್ರಮುಖ ರಸ್ತೆಗಳಲ್ಲಿ ಎಲ್ಲೆಡೆ ಬಿಜೆಪಿ ಬಾವುಟಗಳೇ ಕಾಣಿಸುತ್ತಿದ್ದು. ಇಡೀ ಕುಂದಾನಗರಿ ಕೇಸರಿಮಯಗೊಂಡಿದೆ. ಇತ್ತಿಚೆಗೆ ಅಗಲಿದ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಅಮಿತ್ ಷಾ ಸಾಂತ್ವನ ಹೇಳಲಿದ್ದಾರೆ.
ಇನ್ನು ಯಾವುದೇ ರೀತಿ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ನಿಯೋಜಿಸಲಾಗಿದೆ. ಜನಸೇವಕ ಸಮಾವೇಶ ನಡೆಯಲಿರುವ ಜಿಲ್ಲಾ ಕ್ರೀಡಾಂಗಣದ ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು. ನಗರದ ಸೂಕ್ಷ್ಮ ಗಲ್ಲಿಗಳಲ್ಲಿಯೂ ತೀವ್ರ ನಿಗಾ ವಹಿಸಲಾಗಿದೆ.
ಒಟ್ಟಾರೆ ನಾಳೆಯ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಸೇರುವ ಸಾಧ್ಯತೆಯಿದ್ದು. ಕೋವಿಡ್ ನಿಯಮ ಪಾಲಿಸುತ್ತೇವೆ ಎಂದು ಹೇಳಿರುವ ಬಿಜೆಪಿ ನಾಯಕರು ಎಷ್ಟರ ಮಟ್ಟಿಗೆ ನಿಯಮ ಪಾಲಿಸುತ್ತಾರೆ ಎಂದು ಕಾಯ್ದು ನೋಡಬೇಕಿದೆ.