Belagavi

ಸ್ವಾಮಿ ವಿವೇಕಾನಂದ ಜಯಂತಿ: ಬೆಳಗಾವಿಯಲ್ಲಿ ಯುವ ಮೋರ್ಚಾದಿಂದ ರ್ಯಾಲಿ

Share

ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಬೆಳಗಾವಿಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ರ್ಯಾಲಿ ಆಯೋಜಿಸಲಾಗಿತ್ತು.

ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಬೆಳಗಾವಿ ಚನ್ನಮ್ಮ ಸರ್ಕಲ್‍ನಿಂದ ಕಿಲ್ಲಾ ಪ್ರದೇಶದ ರಾಮಕೃಷ್ಣ ವಿವೇಕಾನಂದ ಆಶ್ರಮದವರೆಗೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೆರವಣಿಗೆ ನಡೆಯಿತು. ಕಾರ್ಯಕರ್ತರು ವಿವೇಕಾನಂದ ವೀರ ಸಂದೇಶಗಳ ಘೋಷಣೆ ಮೊಳಗಿಸಿ ಜಾಗೃತಿ ಮೂಡಿಸಿದರು.

ಬಿಜೆಪಿ ಮೆಟ್ರೋಪಾಲಿಟಿನ್ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ, ಉಪಾಧ್ಯಕ್ಷ ವಿಕ್ರಮ ಸಿಂಗ್ ರಾಜಪುರೋಹಿತ, ಪ್ರಧಾನ ಕಾರ್ಯನಿರ್ವಾಹಕ ಮುರುಘೇಂದ್ರಗೌಡ ಪಾಟೀಲ, ದಾದಾಗೌಡ ಬಿರಾದಾರ, ಗಿರೀಶ ಧೋಂಗಡಿ, ಮಹಾನಗರ ಯುವ ಮೋರ್ಚಾ ಅಧ್ಯಕ್ಷ ಪ್ರಸಾದ ದೇವರಮನಿ, ಉತ್ತರ ಯುವ ಮೋರ್ಚಾ ಅಧ್ಯಕ್ಷ ಸದಾನಂದ ಗುಂಟಪ್ಪನವರ, ದಕ್ಷಿಣ ಯುವ ಮೋರ್ಚಾ ಅಧ್ಯಕ್ಷ ವಿವೇಕ ಪಾಟೀಲ, ಯುವ ಮೋರ್ಚಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Tags:

error: Content is protected !!