ಶಿರಸಂಗಿಯ ಕಾಳಿಕಾದೇವಿ ದೇವಸ್ಥಾನದ ಸಭಾಂಗಣದಲ್ಲಿ ವಿಶ್ವಕರ್ಮ ಯುವ ಬರಹಗಾರರಿಗಾಗಿ ಏರ್ಪಡಿಸಲಾಗಿದ್ದ ಎರಡು ದಿನಗಳ ರಾಜ್ಯ ಮಟ್ಟದ ಕಾವ್ಯ ಕಥಾ ಕಮ್ಮಟ ಸಮಾರೋಪಗೊಂಡಿತು. ಧಾರವಾಡ ಆಕಾಶವಾಣಿ ನಿರ್ದೇಶಕ ಡಾ,ಬಸು ಬೇವಿನಗಿಡದ ಸಮಾರೋಪ ಭಾಷಣ ಮಾಡಿದರು.
ಕಮಲಾಪುರ ಬೆಣ್ಣೂರಿನ ಮಯ ಪ್ರಕಾಶನ, ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಹಾಗೂ ಸಂಶೋಧಕರ ವೇದಿಕೆ ಮತ್ತು ಶಿರಸಂಗಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ, ಉತ್ತರ ಕರ್ನಾಟಕ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಶಿರಸಂಗಿಯ ಕಾಳಿಕಾದೇವಿ ದೇವಸ್ಥಾನದ ಸಭಾಂಗಣದಲ್ಲಿ ವಿಶ್ವಕರ್ಮ ಯುವ ಬರಹಗಾರರಿಗಾಗಿ ಎರಡು ದಿನಗಳ ರಾಜ್ಯ ಮಟ್ಟದ ಕಾವ್ಯ ಕಥಾ ಕಮ್ಮಟ ಏರ್ಪಡಿಸಲಾಗಿತ್ತು.
ಸಮಾರೋಪ ಭಾಷಣ ಮಾಡಿದ ಧಾರವಾಡ ಆಕಾಶವಾಣಿ ನಿರ್ದೇಶಕ ಡಾ,ಬಸು ಬೇವಿನಗಿಡದ ಮಾತನಾಡಿ, ಬರಹ ಆತ್ಮವಿಶ್ವಾಸವನ್ನು ಹೆಚ್ಚಿಸುವ ಜೊತೆಗೆ ಸಮುದಾಯಗಳ ಅಸ್ಮಿತೆಯ ಪ್ರತೀಕವಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಶಿಲ್ಪಕಲಾ ಅಕಾಡಮಿಯ ಅಧ್ಯಕ್ಷ ವೀರಣ್ಣ ಅರ್ಕಸಾಲಿ ಮಾತನಾಡಿ, ಜ್ಞಾನದ ಹಸಿವು ನೀಗಿಸುವ ಶಕ್ತಿ ಬರಹಕ್ಕೆ ಮಾತ್ರ ಇದೆ ಎಂದರು.
ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪೆÇ್ರ ಪಿ.ಬಿ.ಬಡಿಗೇರ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಮ್ಮಟದ ನಿರ್ದೇಶಕರಾದ ಡಾ.ವೀರೇಶ ಬಡಿಗೇರ ವಹಿಸಿದ್ದರು. ಬಸವರಾಜ ಬಡಿಗೇರ ಬೋರಗಿ ಪ್ರಾರ್ಥಿಸಿದರು. ಚಂದ್ರಶೇಖರ ಕಾಳನ್ನವರ ಸ್ವಾಗತಿಸಿದರು.
ಚಂದ್ರಶೇಖರ ಆರ,ವೇದಪಾಠಕ, ಅರವಿಂದ ಪತ್ತಾರ, ಶ್ರೀಕಾಂತ ಪತ್ತಾರ, ಸಿ.ಪಿ ಮಾಯಾಚಾರಿ.ವಿರುಪಾಕ್ಷ ಬಡಿಗೇರ, ಭೀಮಸೇನ ಬಡಿಗೇರ, ಹನಮಂತಗೌಡ ಕಲ್ಮನಿ, ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಸದಸ್ಯರು, ಕಮ್ಮಟದ ಸಂಚಾಲಕ ಮನು ಪತ್ತಾರ, ಪ್ರಹ್ಲಾದ ಪತ್ತಾರ, ಅರುಣಕುಮಾರ, ವಿಶ್ವನಾಥ ಪತ್ತಾರ, ಸಂಗಮೇಶ ಬಡಿಗೇರ, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.