COVID-19

ವಿಜಯಪುರ; ಜನೇವರಿ 1 ರಿಂದ 8 ವರೆಗೆ 15 ವಿದ್ಯಾರ್ಥಿಗಳಲ್ಲಿ ಹಾಗೂ 7 ಉಪನ್ಯಾಸಕರು ಶಿಕ್ಷಕರಲ್ಲಿ ಕೊರೊನಾ ಪಾಸಿಟಿವ್ ದೃಢ

Share

ಜನೇವರಿ 1 ರಿಂದ ಪಿಯು ಕಾಲೇಜ್ ಹಾಗೂ ಶಾಲೆಗಳು ಆರಂಭವಾಗಿವೆ. ಈಗ ಕೊರೊನಾ ಶಾಲಾ ವಿದ್ಯಾರ್ಥಿಗಳನ್ನು, ಕಾಲೇಜು ಉಪನ್ಯಾಸಕರನ್ನು ಶಾಲಾ ಶಿಕ್ಷಕರನ್ನು ಕಾಡುತ್ತಿದೆ.

ಜನೇವರಿ 1 ರಿಂದ 8 ವರೆಗೆ 15 ವಿದ್ಯಾರ್ಥಿಗಳಲ್ಲಿ ಹಾಗೂ 7 ಉಪನ್ಯಾಸಕರು ಶಿಕ್ಷಕರಲ್ಲಿ ಪಾಸಿಟಿವ್ ದೃಢವಾಗಿದೆ. ಈವರೆಗೆ 4599 ವಿದ್ಯಾರ್ಥಿಗಳು, 1,756 ಉಪನ್ಯಾಸಕರು, ಶಿಕ್ಷಕರ ಕೊರೊನಾ ಟೆಸ್ಟ್ ಮಾಡಲಾಗಿದೆ. ಪಾಸಿಟಿವ್ ಪೀಡಿತರನ್ನು ಹೋಂ ಐಸೋಲೇಟ್ ಮಾಡಲಾಗಿದೆ. ಪಾಸಿಟಿವ್ ಪೀಡಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಿಗೆ ಹೋಂ ಕ್ವಾರಂಟೈನ್ ಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಮಾಹಿತಿ ನೀಡಿದ್ದಾರೆ..

Tags:

error: Content is protected !!