Belagavi

ಬಿಜೆಪಿಗೂ ವಂಚನೆ ಪ್ರಕರಣದ ಯುವರಾಜ ಸ್ವಾಮಿಗೂ ಸಂಬಂಧವಿಲ್ಲ: ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ

Share

ಬಿಜೆಪಿಗೂ ವಂಚನೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಯುವರಾಜ ಸ್ವಾಮಿಗೂ ಸಂಬಂಧವಿಲ್ಲ, ಯಾರೋ ಬಂದು ಮಾಲೆ ಹಾಕಿ ಫೋಟೋ ಕ್ಲಿಕ್ಕಿಸಿಕೊಂಡ ತಕ್ಷಣ ಅವರ ಜೊತೆ ಸಂಬಂಧ ಇದೆ ಎಂದು ಕಥೆ ಹೆಣೆಯುವುದು ಸರಿಯಲ್ಲ. ಯುವರಾಜ ಸ್ವಾಮಿ ವಂಚನೆ ಬಗ್ಗೆ ಈಗಾಗಲೇ ಸಿಸಿಬಿಯವರು ತನಿಖೆ ಆರಂಭಿಸಿದ್ದಾರೆ. ಕ್ರಮ ಕೈಗೊಳ್ಳುತ್ತಾರೆ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ನನಗೆ ಇರುವ ಮಾಹಿತಿ ಪ್ರಕಾರ ಯುವರಾಜ ಸ್ವಾಮಿ ಮೊದಲು ಚಿತ್ರದುರ್ಗದ ಮಠವೊಂದರಲ್ಲಿ ಸ್ವಾಮಿಯಾಗಿದ್ದ. ಭಕ್ತರು ಅಲ್ಲಿಂದ ಹೊರಗೆ ಹಾಕಿದರು. ನಂತರ ಬೆಂಗಳೂರಿನಲ್ಲಿ ನೆಲೆಸಿದ್ದ ಯುವರಾಜಸ್ವಾಮಿ, ಆರ್‍ಎಸ್‍ಎಸ್‍ನಿಂದ ಬಂದವನು ಎಂದು ಹೇಳಿಕೊಂಡು ಓಡಾಡಿಕೊಂಡಿದ್ದ. ಸಹಜವಾಗಿಯೇ ಬಿಜೆಪಿ ಜೊತೆ ಸ್ನೇಹ ಬೆಳೆಸಿದ. ಕಾರ್ಯಕ್ರಮಗಳಲ್ಲಿ ಸಚಿವರು, ಶಾಸಕರು, ನಾಯಕರಿಗೆಲ್ಲ ಮಾಲೆ ಹಾಕಿ ಫೋಟೋ ತೆಗೆಸಿಕೊಂಡಿದ್ದಾನೆ. ಹಾಗೆಯೇ ನನಗೆ ಮಾಲೆ ಹಾಕಿದಾಗಲೂ ಫೋಟೋ ತೆಗೆಸಿಕೊಂಡಿರಬಹುದು. ಹಾಗೆಂದು ನನಗೆ ಆತನ ಪರಿಚಯವಿಲ್ಲ, ಸಂಬಂಧವೂ ಇಲ್ಲ. ಸಿಸಿಬಿಯವರು ತನಿಖೆ ಕೈಗೊಂಡಿದ್ದಾರೆ. ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳುತ್ತಾರೆ ಎಂದರು.

ಒಟ್ಟಿನಲ್ಲಿ ಯುವರಾಜಸ್ವಾಮಿಗೂ ನನಗೂ ಪರಿಚಯವಿಲ್ಲ, ಸಂಬಂಧವೂ ಇಲ್ಲ. ಫೋಟೋ ತೆಗೆಸಿಕೊಂಡವರೆಲ್ಲ ನನಗೆ ಗೊತ್ತಿರುವುದಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.

Tags:

error: Content is protected !!