Politics

ಪಾದಯಾತ್ರೆ ಬಿಟ್ಟು ಕೂಡಲಸಂಗಮ ಸ್ವಾಮೀಜಿ ಮಾತುಕತೆ ಬರಲಿ..ಸಿಎಂ ಮಾತುಕತೆಗೆ ಸಿದ್ಧರಿದ್ದಾರೆ..ಸಚಿವ ಮುರುಗೇಶ್ ನಿರಾಣಿ

Share

ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಜೊತೆಗೆ ಮಾತನಾಡಲು ಮುಖ್ಯಮಂತ್ರಿಗಳು ಸಿದ್ಧರಿದ್ದಾರೆ. ಸ್ವಾಮೀಜಿ ಬೇಡಿಕೆ ಅದಕ್ಕೆ ಬೇಕಾದ ಪರಿಹಾರದ ಬಗ್ಗೆ ಚರ್ಚೆ ನಡೆಸಬಹುದು. ಸಿಎಂ ಯಡಿಯೂರಪ್ಪ ಅವರು ತಮ್ಮ ಇತಿಮಿತಿಯೊಳಗೆ ಬೇಡಿಕೆ ಈಡೇರಿಸಲು ಸಿದ್ಧರಿದ್ದಾರೆ ಎಂದು ನೂತನ ಸಚಿವ ಮುರುಗೇಶ ನಿರಾಣಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

2 ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮ ಸ್ವಾಮೀಜಿ ಪಾದಯಾತ್ರೆ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮುರಗೇಶ ನಿರಾಣಿ ಹೇಳಿಕೆ 2ಎ ಮೀಸಲಾತಿಗೆ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ವೀರಶೈವ ಲಿಂಗಾಯತ ಹಾಗೂ ಇತರ ಸಮಾಜಕ್ಕೆ ಅವಕಾಶ ಸಿಗಬೇಕೆಂಬ ಆಸೆ ನಮ್ಮದು. ಸ್ವಾಮೀಜಿ ಹಾಗೂ ಅವರ ಸುತ್ತಲಿರುವ ಎಲ್ಲರೂ ಬುದ್ಧಿವಂತರಿದ್ದಾರೆ. ಹೋರಾಟದ ಜತೆಗೆ ಸ್ವಾಮೀಜಿ ಸಿಎಂ ಜೊತೆಗೆ ಮಾತುಕತೆಗೆ ಬರಬೇಕು. ಸಿಎಂ ಸ್ವಾಮೀಜಿ ಜೊತೆ ಮಾತುಕತೆಗೆ ಸಿದ್ಧರಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇನ್ನು ಇದೇ ವೇಳೆ ಯತ್ನಾಳ ಸಿಡಿ ಬಾಂಬ್ ವಿಚಾರವಾಗಿ ಪ್ರತಿಕ್ರಿಯಿಸಲು ಸಚಿವ ಮುರುಗೇಶ ನಿರಾಣಿ ನಿರಾಕರಿಸಿದರು. ಇನ್ನು ತಮ್ಮ ಮೇಲೆ ಆಲಂ ಪಾμÁ ಮಾಡಿರುವ ಆರೋಪಕ್ಕೆ ನಿನ್ನೆಯೇ ಪ್ರತಿಕ್ರಿಯೆ ನೀಡಿದ್ದೇನೆ. ಆತ ಒಬ್ಬ ದೊಡ್ಡ ಚೀಟರ್ ಎಂದು ಮುರಗೇಶ ನಿರಾಣಿ ಗೇಲಿ ಮಾಡಿದರು.

ಇನ್ನು ಸೋಮವಾರ ನೂತನ ಸಚಿವರಿಗೆ ಖಾತೆ ಹಂಚಿಕೆ ಆಗಲಿದೆ. ನಾನು ಹಿಂದೆಯೂ ಯಾವುದೇ ಖಾತೆ ಕೇಳಿಲ್ಲ, ಈಗಲೂ ಕೇಳಲ್ಲ. ನನಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಸರ್ಕಾರ ಹಾಗೂ ಪಕ್ಷಕ್ಕೆ ಒಳ್ಳೆಯ ಹೆಸರು ತರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಉಮೇಶ್ ಕತ್ತಿ ಅವರು ಎಂಟು ಸಲ ಶಾಸಕರಾಗಿದ್ದಾರೆ, ಹಿರಿಯರಿದ್ದಾರೆ. ಹಿರಿತನಕ್ಕೆ ಆಧರಿಸಿ ಸಿಎಂ ಅವರಿಗೆ ಸೂಕ್ತ ಸ್ಥಾನಮಾನ ನೀಡಲಿದ್ದಾರೆ ಎಂದು ಹೇಳಿದರು.

ಅಮಿತ್ ಶಾ ನಾಳೆ ದೇಶದ ಅತಿದೊಡ್ಡ ಇಥಿನಾಳ ಘಟಕ ಉದ್ಘಾಟಿಸಲಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿರುವ ಕೆರಕಲಮಟ್ಟಿ ಗ್ರಾಮದಲ್ಲಿ ನಡೆಯಲಿರುವ ಕಾರ್ಯಕ್ರಮ ಇದಾಗಿದ್ದು. ಕಾರ್ಖಾನೆ ವಿಸ್ತರಣೆಗೂ ಅಮಿತ್ ಶಾ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಸಿಎಂ ಆದಿಯಾಗಿ ಕೇಂದ್ರ ಹಾಗೂ ರಾಜ್ಯದ ಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮಕ್ಕೆ ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಒಟ್ಟಾರೆ ನಾನಾಗಿಯೇ ಇದೇ ಖಾತೆ ನೀಡುವಂತೆ ಕೇಳಲ್ಲ. ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಬೆಳಗಾವಿಯಲ್ಲಿ ನೂತನ ಸಚಿವ ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tags:

error: Content is protected !!