Belagavi

ನಾರಾಯಣಗೌಡ ಯಾರು ಎಂದ ಸಚಿವ ಸುಧಾಕರ್‌ಗೆ ಕರವೇ ತಕ್ಕ ಉತ್ತರ..ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ..!

Share

ನಿಪ್ಪಾಣಿಯಲ್ಲಿ ಮರಾಠಿ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭಾಗಿಯಾಗಿದ್ದಕ್ಕೆ ರಾಜೀನಾಮೆ ನೀಡುವಂತೆ ಕರವೇ ನಾರಾಯಣಗೌಡ ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಯಿಸಿದ್ದ ಸುಧಾಕರ್ ನಾರಾಯಣಗೌಡ ಯಾರು ಎಂದು ಕೇಳಿದ್ದರು. ಇದರಿಂದ ಆಕ್ರೋಶಗೊಂಡ ಬೆಳಗಾವಿ ಕರವೇ ಕಾರ್ಯಕರ್ತರು ಆರೋಗ್ಯ ಸಚಿವರ ಕಾರಿಗೆ ಘೇರಾವ್ ಹಾಕಿರುವ ಘಟನೆ ನಡೆದಿದೆ.

ಹೌದು ಸೋಮವಾರ ಬೆಳಗಾವಿ ಡಿಸಿ ಕಚೇರಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹೊರಗೆ ಬರುತ್ತಿದ್ದಂತೆ ಸಚಿವ ಡಾ.ಕೆ.ಸುಧಾಕರ್ ಕಾರಿಗೆ ಘೇರಾವ್ ಹಾಕಲು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರು ಸಜ್ಜಾಗಿದ್ದರು. ಈ ವೇಳೆ ಸುಧಾಕರ್ ಜೊತೆ ವಾಗ್ವಾದಕ್ಕಿಳಿದ ಕರವೇ ಕಾರ್ಯಕರ್ತರು ಕರ್ನಾಟಕದಲ್ಲಿ ಹಗಲೀರುಳು ಕನ್ನಡವನ್ನು ಕಟ್ಟುವ ಕೆಲಸ ಮಾಡುತ್ತಿರುವ ನಾರಾಯಣಗೌಡ ಯಾರು ಎಂದು ಪ್ರಶ್ನೆ ಮಾಡುತ್ತಿರಿ ಎಂದು ಪ್ರಶ್ನಿಸಿದರು. ಇದೇ ವೇಳೆ ಸುಧಾಕರ್ ಕಾರಿನ ಮುಂದೆಯೇ ಕುಳಿತು ಧಿಕ್ಕಾರದ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ ಸಚಿವ ಸುಧಾಕರ್ ತಮ್ಮ ಹೇಳಿಕೆಯನ್ನು ವಾಪಸ್ಸು ಪಡೆದುಕೊಂಡು, ರಾಜ್ಯದ ಜನತೆ ಕ್ಷಮೆ ಕೇಳಬೇಕು. ಇಲ್ಲದೇ ಹೋದ್ರೆ ನಾಳೆ ಅವರು ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾದ್ರೂ ಕೂಡ ಅಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ, ಅವರ ಕಾರಿಗೆ ಘೇರಾವ್ ಹಾಕಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ಇನ್ನೊರ್ವ ಕರವೇ ಮುಖಂಡ ಸುರೇಶ ಗವನ್ನವರ ಮಾತನಾಡಿ ನಾರಾಯಣಗೌಡರು ಯಾರು ಎಂದು ಕೇಳುವ ಮೂಲಕ ಡಾ.ಸುಧಾಕರ್ ಕನ್ನಡಿಗರನ್ನು, ಕರವೇ ಕಾರ್ಯಕರ್ತರು ಕೆರಳುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿ ಕನ್ನಡವನ್ನು ಕಟ್ಟುವ ಕೆಲಸ ಮಾಡುತ್ತಿರುವ ನಾರಾಯಣಗೌಡ ವಿರುದ್ಧ ಮಾತನಾಡಿರುವುದು ಸರಿಯಲ್ಲ. ನಾರಾಯಣಗೌಡರು ಯಾರು ಎಂದು ಕೇಳಲು ಡಾ.ಸುಧಾಕರ್ ಯಾರು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಒಟ್ಟಾರೆ ನನ್ನ ರಾಜೀನಾಮೆ ಕೇಳಲು ನಾರಾಯಣಗೌಡ ಯಾರು ಎಂದು ಕೇಳಿದ ಸಚಿವ ಸುಧಾಕರ್‌ಗೆ ಬೆಳಗಾವಿ ಕರವೇ ಕಾರ್ಯಕರ್ತರು ಘೇರಾವ್ ಬಿಸಿ ಮುಟ್ಟಿಸಿದ್ದು. ನಾರಾಯಣಗೌಡರ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದು. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಕಾಯ್ದು ನೋಡಬೇಕಿದೆ.

 

 

Tags:

error: Content is protected !!